ಮಾಣಿ ವಲಯದ  ಬರಿಮಾರು ಒಕ್ಕೂಟದ ವಾರ್ಷಿಕೋತ್ಸವ ಕಾರ್ಯಕ್ರಮ 

ಮಾಣಿ: ವಲಯದ  ಬರಿಮಾರು ಒಕ್ಕೂಟದ ವಾರ್ಷಿಕೋತ್ಸವ ಕಾರ್ಯಕ್ರಮ  ಬರಿಮಾರಿನ ಶ್ರೀ ವಿನಾಯಕ ಶ್ರೀದೇವಿ ಭಜನಾ ಮಂದಿರದ ಆವರಣದಲ್ಲಿ ನಡೆಯಿತು.

ಬರಿಮಾರು  ಗ್ರಾಮ ಪಂಚಾಯತ್ ಅಧ್ಯಕ್ಷ ಸದಾಶಿವ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರ ಮಾಡದೇ ಇರುವ ಅನೇಕ ಕಾರ್ಯಕ್ರಮಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ  ಮಾಡುತ್ತಿದೆ. ಬ್ಯಾಂಕ್ ಮೂಲಕ ಸದಸ್ಯರಿಗೆ  ಸಾಲ ಸೌಲಭ್ಯ ಒದಗಿಸುವುದಲ್ಲದೆ    ಸಮುದಾಯಕ್ಕೂ ವಿವಿಧ ರೀತಿಯ ಸೇವೆ ಒದಗಿಸುತ್ತಿದೆ ಎಂದರು.

ಮುಖ್ಯ ಅತಿಥಿಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಮಾ ವಿಭಾಗದ ಯೋಜನಾಧಿಕಾರಿ ಸತೀಶ್ ಮಾತಾಡಿ, ಯೋಜನೆ ನಡೆದು ಬಂದ ದಾರಿ, ಯೋಜನೆಯ ಹಿನ್ನೆಲೆ, ನಿಯಮಗಳು, ಸಂಘದ ಜವಾಬ್ದಾರಿಗಳ  ಬಗ್ಗೆ  ಮಾರ್ಗದರ್ಶನ  ನೀಡಿದರು.





















































 
 

ಬಂಟ್ವಾಳ ತಾಲೂಕು ಪಂಚಾಯತ್  ಅಭಿವೃದ್ಧಿ  ಅಧಿಕಾರಿ ಅಶೋಕ್ ಕುಮಾರ್ ಮಾತನಾಡಿ,  ಶ್ರೀ ಕ್ಷೇತ್ರ ಧರ್ಮಸ್ಥಳದ  ಎಲ್ಲಾ ಕಾರ್ಯಕ್ರಮಗಳು  ಅರ್ಥ ಪೂರ್ಣವಾಗಿ ನಡೆಯುವ ಬಗ್ಗೆ ,ತಾನೂ ಎಲ್ಲಾ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಬಗ್ಗೆ ತಿಳಿಸಿದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಕಮಲಾಕ್ಷಿ ಉದ್ಯಮಿ ರತ್ನಾಕರ, ಬರಿಮಾರು ಹಾಲು ಉತ್ಪಾದಕರ ಸಹಕಾರಿ ಸಂಘದ  ಅಧ್ಯಕ್ಷ ಅಮಿತ್ ಜೈನ್, ಶಾಲಾ ಮುಖ್ಯ ಶಿಕ್ಷಕಿ ಗಾಯತ್ರಿ,, ಶ್ರೀ ವಿನಾಯಕ ಶ್ರೀದೇವಿ ಭಜನಾ ಮಂದಿರದ ಅಧ್ಯಕ್ಷ ಶಿವಾನಂದ  ಉಪಸ್ಥಿತರಿದ್ದರು ಬರಿಮಾರು ಒಕ್ಕೂಟದ ಅಧ್ಯಕ್ಷ, ಮಾಣಿ ವಲಯಧ್ಯಕ್ಷ ಸುಧಾಕರ   ಸಪಲ್ಯ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಉತ್ತಮ ಸಂಘಗಳನ್ನು ಗುರುತಿಸಿ ಅಭಿನಂದಿಸಲಾಯಿತು. SSLC ಯಲ್ಲಿ. 90% ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಅಭಿನಂದಿಸಲಾಯಿತು.  ಹರಿಣಾಕ್ಷಿ ಸ್ವಾಗತಿಸಿ, ಸುಜಾತ ವಂದಿಸಿದರು. ಮಾಣಿ ವಲಯ ಮೇಲ್ವಿಚಾರಕಿ ಆಶಾ ಪಾರ್ವತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೇವಾ ಪ್ರತಿನಿಧಿ  ಲಾವಣ್ಯ ವರದಿ ವಾಚಿಸಿದರು. ಗೀತಾ ಕಾರ್ಯಕ್ರಮ ನಿರೂಪಿಸಿದರು.

ಸಂಘದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

error: Content is protected !!
Scroll to Top