ಅಕ್ರಮ ಚಿನ್ನ ಸಾಗಾಟ ಪ್ರಕರಣ: ರನ್ಯಾ ರಾವ್‌ಗೆ ದಂಡ ಸಹಿತ 102 ಕೋಟಿ ರೂ. ಪಾವತಿಸಲು ಸೂಚನೆ

ಬೆಂಗಳೂರು: ದುಬೈನಿಂದ ಅಕ್ರಮ ಚಿನ್ನ ಸಾಗಾಟಕ್ಕೆ ಸಂಬಂಧಿಸಿದಂತೆ ನಟಿ ರನ್ಯಾ ರಾವ್ ‌ಗೆ ಡಿಆರ್‌ಐ 102 ಕೋಟಿ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.

ಧೀರ್ಘ ತನಿಖೆಯಲ್ಲಿ ರನ್ಯಾ ರಾವ್ 127 kg ಚಿನ್ನವನ್ನು ಅಕ್ರಮವಾಗಿ ಭಾರತಕ್ಕೆ ತಂದಿರುವುದು ‌ಸಾಬೀತಾಗಿದ್ದು, ಈ ಸಂಬಂಧ ಎಲ್ಲಾ ಸಾಕ್ಷ್ಯಾಧಾರಗಳು ಅಧಿಕಾರಿಗಳಿಗೆ ದೊರೆತಿದೆ. ಇದರ ಆಧಾರದಲ್ಲಿ ಆರೋಪಿಗೆ ಶೋ ಕಾ ಸ್ ನೊಟೀಸ್ ನೀಡಲಾಗಿದ್ದು, ದಂಡ‌ ಸಹಿತ 102 ಕೋಟಿ ರೂ. ಪಾವತಿಸಲು ಸೂಚಿಸಲಾಗಿದೆ.

ಪ್ರಕರಣದ ಇತರ ನಾಲ್ವರು ಆರೋಪಿಗಳಿಗೂ ಶೋಕಾಸ್ ನೊಟೀಸ್ ನೀಡಲಾಗಿದೆ. ಈಗಾಗಲೇ 37 ಕೋಟಿ ಬೆಲೆ ಬಾಳುವ ಆಸ್ತಿ ಕಳೆದುಕೊಂಡಿರುವ ರನ್ಯಾ‌ಗೆ ಇದು ಮತ್ತೊಂದು ದೊಡ್ಡ ಶಾಕ್ ಆಗಿದೆ.





















































 
 
error: Content is protected !!
Scroll to Top