ಪಾಟ್ನಾ: ಬಿಹಾರದಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿ ತಮ್ಮ ತಾಯಿಗೆ ಅವಮಾನ ಮಾಡಿದ್ದಾರೆ ಎಂಬ ಕಾರಣಕ್ಕೆ ವಾಗ್ದಾಳಿ ನಡೆಸಿರುವ ಪ್ರಧಾನಿ ಮೋದಿ ಇದು ದೇಶದ ಎಲ್ಲಾ ತಾಯಂದಿರಿಗೆ ಮಾಡಿರುವ ಅವಮಾನ ಎಂದು ಹೇಳಿದ್ದಾರೆ.
ನನ್ನ ತಾಯಿಗೆ ಅವರು ಬಳಸಿದ ಪದ ನನ್ನೊಂದಿಗೆ ನಿಮಗೂ ನೋವು ನೀಡಿದೆ ಎಂದು ನನಗೆ ತಿಳಿದಿದೆ. ಇದು ದೇಶದ ಎಲ್ಲಾ ತಾಯಿಯರಿಗೆ, ಸಹೋದರಿಯರಿಗೆ ಮಾಡಿದ ಅವಮಾನ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನ್ನ ತಾಯಿ ನಮ್ಮನ್ನು ಬೆಳೆಸಲು ಬಡತನದ ಕಾರಣದಿಂದ ಸಾಕಷ್ಟು ಕಷ್ಟ ಪಟ್ಟಿದ್ದರು. ಅನಾರೋಗ್ಯ ಇದ್ದರೂ ನನ್ನ ತಾಯಿ ಕೆಲಸ ಮಾಡುತ್ತಿದ್ದರು. ನಮಗೆ ಬಟ್ಟೆ ತೆಗೆಯಲು ಪೈಸೆ ಪೈಸೆ ಕೂಡಿಡುತ್ತಿದ್ದರು. ಈ ದೇಶದಲ್ಲಿ ಅವರ ಹಾಗೆ ಕೋಟ್ಯಂತರ ತಾಯಂದಿರಿದ್ದಾರೆ ಎಂದು ಅವರು ನುಡಿದಿದ್ದಾರೆ.
























