ಧರ್ಮಸ್ಥಳ ಪ್ರಕರಣ NIA ಅಥವಾ CBI ಗೆ ವಹಿಸಿ: ಬಿ.ವೈ. ವಿಜಯೇಂದ್ರ

ಬೆಂಗಳೂರು: ರಾಜ್ಯದಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವಂತಹ ವಿಷಯಗಳು ಕಳೆದ ಎರಡೂವರೆ ವರ್ಷದಿಂದ ನಡೆಯುತ್ತಲೇ ಇದೆ. ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಆಗುತ್ತಿದ್ದರೂ ಸಹ ಇದಕ್ಕೆ ಕಡಿವಾಣ ಹಾಕುವಂತಹ ಮನಸ್ಸು ಸರ್ಕಾರಕ್ಕೆ ಬಂದಿಲ್ಲ. ದೇಶ ವಿದೇಶಗಳಲ್ಲಿ ಅಪಪ್ರಚಾರ ಆಗುತ್ತಿರುವ ಈ ವಿಷಯದ ಬಗ್ಗೆ ರಾಷ್ಟ್ರೀಯ ಪಕ್ಷವಾಗಿ ಮೌನ ವಹಿಸಲು ಸಾಧ್ಯ ಇಲ್ಲ ಎಂದು ಬಿಜೆಪಿ ರಾಜ್ ರಾಜ್ ಪಕ್ಷ ಬಿ. ವೈ. ವಿಜಯೇಂದ್ರ ತಿಳಿಸಿದ್ದಾರೆ.

ಧರ್ಮಸ್ಥಳ ಕ್ಷೇತ್ರದ ಬಗ್ಗೆ ನಡೆಯುತ್ತಿರುವ ಷಡ್ಯಂತ್ರಗಳ ವಿರುದ್ಧ ಧರ್ಮಸ್ಥಳ ಚಲೋ ಯಾತ್ರೆಗೆ ಕರೆ ನೀಡಿದೆವು. ಇದು ಯಶಸ್ವಿಯಾಗಿದ್ದು, ಸರ್ಕಾರವನ್ನು ಎಚ್ಚರಗೊಳಿಸುವ ಕೆಲಸ ಮಾಡಿದ್ದೇವೆ. ರಾಜ್ಯದ ಆಡಳಿತದಲ್ಲಿ ಕುಳಿತವರಿಗೆ‌ ದೇವರು ಒಳ್ಳೆಯ ಬುದ್ಧಿ ಕೊಟ್ಟು ಹಿಂದೂಗಳನ್ನು ಕೆಣಕದೆ, ದುಷ್ಟರಿಗೆ ತಕ್ಕ ಶಿಕ್ಷೆ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಚ್ಚರಿಕೆ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.

ಸೌಜನ್ಯ ಕುಟುಂಬಕ್ಕೆ ಕಳೆದ 12 ವರ್ಷಗಳಿಂದ ನ್ಯಾಯ ದೊರಕಿಲ್ಲದ್ದರ ಬಗ್ಗೆ ನಮ್ಮ ಕಾರ್ಯಕರ್ತರಿಗೂ ‌ನೋವಿದೆ. ನಾವು ನಿನ್ನೆಯಷ್ಟೇ ಆ ಕುಟುಂಬವನ್ನು ಭೇಟಿ ಮಾಡಿದ್ದೇವೆ. ಸಿಬಿಐ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಹೋಗುವುದಾದರೆ ಬೆಂಬಲ ನೀಡುವುದಾಗಿಯೂ ಹೇಳಿದ್ದೇವೆ. ಇದರಲ್ಲಿ ರಾಜಕೀಯ ಮಾಡುವ ಅಗತ್ಯ ಇಲ್ಲ. ಅವರ ಕುಟುಂಬಕ್ಕೆ ನ್ಯಾಯ ಸಿಗಲಿ ಎಂಬ ಉದ್ದೇಶದಿಂದ ಪ್ರಾಮಾಣಿಕವಾಗಿ ಅಹವಾಲು ಕೇಳಿದ್ದೇನೆ ಎಂದಿದ್ದಾರೆ.





















































 
 

ಧರ್ಮಸ್ಥಳ ಪ್ರಕರಣವನ್ನು NIA ಅಥವಾ CBI ಗೆ ವಹಿಸುವಂತೆ ಆಗ್ರಹಿಸಿರುವುದಾಗಿಯೂ ಅವರು ನುಡಿದಿದ್ದಾರೆ.

error: Content is protected !!
Scroll to Top