ಡಿ.ಕೆ. ಶಿವಕುಮಾರ್ ಅವರಿಗೆ ಎಲ್ಲಾ ರೀತಿಯ ಜ್ಞಾನವೂ ಇದೆ: ಡಾ. ಜಿ. ಪರಮೇಶ್ವರ್

ಬೆಂಗಳೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ರಾಜಕೀಯ ಗೊತ್ತು, ಎಲ್ಲಾ ರೀತಿಯ ಜ್ಞಾನವೂ ಇದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.

ಡಿಕೆಶಿ ‌ನಮ್ಮ ಪಕ್ಷದ ರಾಜ್ಯಾಧ್ಯಕ್ಷರು. ಉಪಮುಖ್ಯಮಂತ್ರಿಗಿಂತಲೂ ಅವರ ಸ್ಥಾನಮಾನ ಹೆಚ್ಚು. ಪಕ್ಷದ ಕಾರ್ಯಕರ್ತರು ಅವರಿಗೆ ಸದಾ ಗೌರವ, ಮರ್ಯಾದೆ ನೀಡುತ್ತಾರೆ ಎಂದು ತಿಳಿಸಿದ್ದಾರೆ.

ರಾಜಕೀಯದಲ್ಲಿ ಅವರು ಸಾಕಷ್ಟು ಅನುಭವ ಹೊಂದಿದವರು. ಎಲ್ಲಾ ರೀತಿಯ ಜ್ಞಾನವೂ ಅವರಲ್ಲಿ ಇದೆ. ಅವರನ್ನು ಐಸೋಲೇಶನ್ ಮಾಡಲಾಗಿದೆ ಎನ್ನುವ ಮಾತು ಸುಳ್ಳು. ಇಂತಹ ಅಪಪ್ರಚಾರಕ್ಕೆ ಅರ್ಥ ಇಲ್ಲ ಎಂದು ಅವರು ನುಡಿದಿದ್ದಾರೆ.





















































 
 
error: Content is protected !!
Scroll to Top