ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಿಂದಲೂ ಒಂದಿಲ್ಲೊಂದು ಎಡವಟ್ಟು ನಡೆಯುತ್ತಲೇ ಇದೆ: ವಿ. ಸೋಮಣ್ಣ

ಬೆಂಗಳೂರು: ಸಿ ಎಂ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಿಲ್ಲೊಂದು ಎಡವಟ್ಟುಗಳು ನಡೆಯುತ್ತಲೇ ಇರುವುದಾಗಿ ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ಮೈಸೂರು ದಸರಾ, ಧರ್ಮಸ್ಥಳ ಪ್ರಕರಣ ಮೊದಲಾದ ಗೊಂದಲಗಳನ್ನು ಗಮನದಲ್ಲಿಟ್ಚುಕೊಂಡು ಅವರು ಈ ಮಾತುಗಳನ್ನು ಹೇಳಿದ್ದಾರೆ.

ಮಾತನಾಡುವುದು ಸುಲಭ. ಆದರೆ ಅದನ್ನು ಜೀರ್ಣ ಮಾಡಿಕೊಳ್ಳುವುದು ಕಷ್ಟ. ಸಿದ್ದರಾಮಯ್ಯ ಲೋಕಸಭೆಗೆ ಸ್ಪರ್ಧಿಸಿದಾಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಆಡಳಿತದಲ್ಲಿತ್ತು ಎನ್ನುವುದು ಅವರು ತಿಳಿದಿದ್ದರೆ, ಅವರು ಯಾರ ಮೇಲೆ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಬೇಕಾಗುತ್ತದೆ. ಹೇಳಿಕೆ ನೀಡುವಾಗ ಜವಾಬ್ದಾರಿಯಿಂದ ನೀಡಬೇಕು ಎಂದು ಅವರು ನುಡಿದಿದ್ದಾರೆ.





















































 
 

ರಾಹುಲ್ ಗಾಂಧಿ ಅವರ ನಡವಳಿಕೆ ಮಕ್ಕಳಿಗಿಂತಲೂ ಕಡೆಯಾಗಿದೆ. ಅವರು ಗಾಳಿಯಲ್ಲಿ ಹಾರಾಡುವುದನ್ನು ಬಿಟ್ಟು ಇತಿಹಾಸ ಅರಿತು ಮಾತನಾಡಿದರೆ ಉತ್ತಮ. ಅವರು ಪಿ ಎಂ ಮೋದಿ ಅವರ ಜನ ಸ್ನೇಹಿ ಯೋಜನೆಗಳು, ಜನಪ್ರಿಯತೆ ನೋಡಿ ತಡೆದುಕೊಳ್ಳಲು ಸಾಧ್ಯವಾಗದೆ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

error: Content is protected !!
Scroll to Top