ಧರ್ಮಸ್ಥಳ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ: ಡಿ.ಕೆ. ಶಿವಕುಮಾರ್

ಬೆಂಗಳೂರು: ಬಿಜೆಪಿಯ ಆಂತರಿಕ ಯೋಜನೆ ಧರ್ಮಸ್ಥಳದ ಆಸ್ತಿಯನ್ನು ಹೊಡೆಯುವುದಾಗಿದೆ ಎಂದು ಡಿಸಿಎಂ ‌ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಧರ್ಮಸ್ಥಳ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಧರ್ಮಸ್ಥಳ ಆಸ್ತಿಯನ್ನು ಕಬಳಿಸಲು ರಾಜ್ಯ ಸರ್ಕಾರ ಹುನ್ನಾರ ನಡೆಸಿದೆ ಎನ್ನುವ ವಿಪಕ್ಷ ನಾಯಕ R. ಅಶೋಕ್ ಅವರಿಗೆ ಮತು ಭ್ರಮಣೆಯಾಗಿದೆ. ತಾನೇನು ಮಾತನಾಡುತ್ತಿದ್ದೇನೆ ಎನ್ನುವ ಅರಿವು ಅವರಿಗೆ ಇಲ್ಲ. ಜಾತಿ ಮತ್ತು ಭಾವನೆಗಳ ಜೊತೆಗೆಯೇ ಬಿಜೆಪಿಯವರು ರಾಜಕೀಯ ಮಾಡಿಕೊಂಡು ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RSS ಗೀತೆ ಹಾಡಿ ಡಿಕೆಶಿ ನಾಟಕ ಮಾಡುತ್ತಿದ್ದಾರೆ ಎನ್ನುವ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮಾತಿಗೂ ಪ್ರತಿಕ್ರಿಯೆ ನೀಡಿರುವ ಅವರು, ಹೌದು, ನಾನು ದಿನಾ ನಾಟಕವಾಡುತ್ತಿದ್ದೇನೆ ಎಂದು ಹೇಳಿದ್ದಾರೆ.





















































 
 

error: Content is protected !!
Scroll to Top