ಆ. 31: ಧರ್ಮಸ್ಥಳಕ್ಕೆ ನೈತಿಕ ಬಲ‌ ತುಂಬಲು ಜೆಡಿಎಸ್‌ನಿಂದ ‘ಧರ್ಮಸ್ಥಳ ಸತ್ಯ ಯಾತ್ರೆ’

ಬೆಂಗಳೂರು: ಧರ್ಮಸ್ಥಳ ಕ್ಷೇತ್ರದ ಮೇಲೆ ಅಪಪ್ರಚಾರ, ಷಡ್ಯಂತ್ರ, ಸುಳ್ಳು ಆರೋಪಗಳು ನಡೆಯುತ್ತಿದ್ದು, ಇದನ್ನು ವಿರೋಧಿಸಿ ಜೆಡಿಎಸ್ ಆ.31 ರಂದು ಧರ್ಮಸ್ಥಳ ಸತ್ಯ ಯಾತ್ರೆ ಕೈಗೊಂಡಿರುವುದಾಗಿ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.

ಸರ್ಕಾರ ಧರ್ಮಸ್ಥಳಕ್ಕೆ ಅಪಮಾನ ಮಾಡಲು ಮುಂದಾಗಿದೆ. ನಾನು ಒಬ್ಬ ಭಕ್ತನಾಗಿ ನಮ್ಮ ಪಕ್ಷದ ನಾಯಕರು, ಕಾರ್ಯಕರ್ತರ ಜೊತೆ ಧರ್ಮಸ್ಥಳಕ್ಕೆ ತೆರಳಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

ಧರ್ಮಸ್ಥಳ ಪ್ರಕರಣದಲ್ಲಿ ತನಿಖೆ ಪಾರದರ್ಶಕವಾಗಿ ನಡೆದಿದೆಯೇ? ಇದರ ಹಿಂದೆ ಯಾರಿದ್ದಾರೆ? ಇವೆಲ್ಲ ತಿಳಿಯಬೇಕಾದರೆ NIA ತನಿಖೆ ನಡೆಯಬೇಕು‌ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.





















































 
 

ಮೈಸೂರು ದಸರಾ ಬಗ್ಗೆ ಮಾತನಾಡಿದ ನಿಖಿಲ್, ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಬಗ್ಗೆ ಗೌರವ ಇದೆ. ಆದರೆ ಅವರು ಕನ್ನಡ, ಕುಂಕುಮ, ತಾಯಿ ಭುವನೇಶ್ವರಿ ಮೇಲೆ ಅದೇ ಗೌರವ ಹೊಂದಿಲ್ಲ. ಇದಕ್ಕಾಗಿ ಅವರು ದಸರಾ ಉದ್ಘಾಟಿಸುವ ಬಗ್ಗೆ ನಮ್ಮ ಆಕ್ಷೇಪ ಎಂದಿದ್ದಾರೆ. ನಮ್ಮ ಧರ್ಮದಲ್ಲಿ ಹಲವಾರು ಸಾಧಕರಿದ್ದಾರೆ. ಆದರೆ ಕಾಂಗ್ರೆಸ್ ಪ್ರತಿಯೊಂದರಲ್ಲೂ ವಿವಾದ ಸೃಷ್ಟಿಸುತ್ತಿದೆ. ಧರ್ಮಸ್ಥಳ ಪ್ರಕರಣದ ಬಳಿಕ, ತಾಯಿ ಚಾಮುಂಡೇಶ್ವರಿ ವಿವಾದ ಸೃಷ್ಟಿಸಲು ಮುಂದಾಗಿದೆ. ಮುಂದೆ ಯಾವ ಧಾರ್ಮಿಕ ಕೇಂದ್ರಕ್ಕೆ ಕೈ ಇಡುತ್ತಾರೋ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

error: Content is protected !!
Scroll to Top