ನವದೆಹಲಿ: 75 ವರ್ಷಗಳನ್ನು ಪೂರೈಸಿದ ಬಳಿಕ ನಾನು ನಿವೃತ್ತಿ ಹೊಂದಬೇಕು ಅಥವಾ ನಿವೃತ್ತಿ ಹೊಂದುವುದಾಗಿ ಎಲ್ಲಿಯೂ ಹೇಳಿಲ್ಲ ಎಂದು RSS ಮುಖ್ಯಸ್ಥ ಮೋಹನ್ ಭಾಗವತ್ ಅವರು ಸ್ಪಷ್ಚನೆ ನೀಡಿದ್ದಾರೆ.
ಮುಂದಿನ ತಿಂಗಳು ಪ್ರಧಾನಿ ಮೋದಿ ಮತ್ತು ಮೋಹನ್ ಭಾಗ್ವತ್ ಅವರಿಬ್ಬರೂ 75 ವರ್ಷಕ್ಕೆ ಕಾಲಿಡಲಿದ್ದು, ಈ ಸಂದರ್ಭದಲ್ಲಿಯೇ ಅವರು ಈ ಸ್ಪಷ್ಟನೆ ನೀಡಿರುವುದಾಗಿದೆ.
75 ವರ್ಷಕ್ಕೆ ನಿವೃತ್ತಿ ಹೊಂದುವ ವಿಷಯದಲ್ಲಿ ವಿರೋಧಿಗಳು ಭಾಗ್ವತ್ ಅವರ ಈ ಹಿಂದಿನ ಹೇಳಿಕೆಯೊಂದನ್ನು ವ್ಯಂಗ್ಯ ಮಾಡುತ್ತಿದ್ದು, ಆ ಕಾರಣಕ್ಕೆ ಈ ಸ್ಪಷ್ಟೀಕರಣ ನೀಡಿರುವುದಾಗಿದೆ. ಹಾಗೆಯೇ ಎಲ್ಲಿಯ ವರೆಗೆ ಸಂಘಕ್ಕೆ ನಮ್ಮ ಸೇವೆಯ ಅಗತ್ಯ ಇದೆಯೋ ಅಲ್ಲಿಯ ವರೆಗೆ ಸೇವೆ ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.
ರಾಜಕೀಯ ಪಕ್ಷಗಳ ಜೊತೆಗೆ ಸಂಘದ ಸಂಬಂಧದ ಬಗೆಗೂ ಮಾತನಾಡಿರುವ ಅವರು, ನಾವು ಎಲ್ಲ ಸರ್ಕಾರಗಳ ಜೊತೆಗೂ ಉತ್ತಮ ಸಂಬಂಧ ಹೊಂದಿದ್ದೇವೆ. ಬಿಜೆಪಿ ಸರ್ಕಾರದ ಜೊತೆಗೆ ನಮಗೆ ಯಾವುದೇ ಜಗಳ ಇಲ್ಲ. ಕೆಲವು ಭಿನ್ನಾಭಿಪ್ರಾಯ ಇದೆ. ಉತ್ತಮ ಕೆಲಸಕ್ಕಾಗಿ ಬಿಜೆಪಿ ಮಾತ್ರವಲ್ಲ ಎಲ್ಲರಿಗೂ ನಾವು ಸಹಕಾರ ನೀಡುತ್ತೇವೆ ಎಂದು ನುಡಿದಿದ್ದಾರೆ.
























