ರಷ್ಯಾ ಡ್ರೋನ್‌ ದಾಳಿ : ಮುಳುಗಿದ ಉಕ್ರೇನ್‌ನ ಅತಿದೊಡ್ಡ ಸಮರ ನೌಕೆ

ತೀವ್ರಗೊಂಡ ರಷ್ಯಾ-ಉಕ್ರೇನ್‌ ಯುದ್ಧ

ಮಾಸ್ಕೊ: ಕಳೆದ ಸುಮಾರು ಮೂರು ವರ್ಷಗಳಿಂದ ನಡೆಯುತ್ತಿರುವ ರಷ್ಯಾ-ಉಕ್ರೇನ್‌ ಯುದ್ಧ ಮತ್ತೆ ತೀವ್ರ ಸ್ವರೂಪ ತಾಳಿದ್ದು, ನಿನ್ನೆ ರಾತ್ರಿ ರಷ್ಯಾ ಡ್ರೋನ್‌ ದಾಳಿ ಮಾಡಿ ಉಕ್ರೇನ್‌ನ ನೌಕಾಪಡೆಯ ಪ್ರಮುಖ ಯುದ್ಧನೌಕೆಯೊಂದನ್ನು ಮುಳುಗಿಸಿದೆ. ಉಕ್ರೇನ್‌ನ ಗಸ್ತು ಹಡಗನ್ನು ರಷ್ಯಾ ಡ್ರೋನ್‌ ದಾಳಿ ನಡೆಸಿ ಮುಳುಗಿದೆ ಎಂದು ವರದಿಯಾಗಿದೆ.

ಉಕ್ರೇನ್‌ ದೊಡ್ಡ ಗಸ್ತು ಹಡಗು ಸಿಮ್ಫೆರೊಪೋಲ್ ಡ್ಯಾನ್ಯೂಬ್ ನದಿಯಲ್ಲಿ ಸಂಚರಿಸುತ್ತಿದ್ದಾಗ ದಾಳಿ ನಡೆಸಲಾಗಿದೆ ಎಂದು ರಷ್ಯಾ ಹೇಳಿದೆ. ರೇಡಿಯೋ, ಎಲೆಕ್ಟ್ರಾನಿಕ್, ರಾಡಾರ್‌ಗಳನ್ನು ಈ ಹಡಗು ಹೊಂದಿತ್ತು.





















































 
 

ದಾಳಿಯಲ್ಲಿ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದು ಹಲವು ಮಂದಿ ಗಾಯಗೊಂಡಿದ್ದಾರೆ. ಹೆಚ್ಚಿನ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಉಕ್ರೇನ್‌ ಮಧ್ಯಮಗಳು ವರದಿ ಮಾಡಿವೆ.

ಸಿಮ್ಫೆರೊಪೋಲ್ ಅನ್ನು 2019ರಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು ಎರಡು ವರ್ಷಗಳ ನಂತರ ಉಕ್ರೇನ್ ನೌಕಾಪಡೆಗೆ ಸೇರ್ಪಡೆಯಾಗಿತ್ತು. 2014ರ ಬಳಿಕ ಉಕ್ರೇನ್‌ ತಯಾರಿಸಿದ ದೊಡ್ಡ ಹಡಗು ಇದಾಗಿದೆ. ಕೆಲ ತಿಂಗಳಿನಿಂದ ರಷ್ಯಾ ಡ್ರೋನ್‌ ಉತ್ಪಾದನೆಗೆ ಹೆಚ್ಚಿಸುತ್ತಿದೆ. ಕಳೆದ ರಾತ್ರಿ ಕ್ಷಿಪಣಿ ದಾಳಿ ನಡೆಸಿ ಉಕ್ರೇನ್‌ನಲ್ಲಿದ್ದ ಡ್ರೋನ್‌ ಸೌಲಭ್ಯ ಘಟಕವನ್ನು ರಷ್ಯಾ ನಾಶ ಮಾಡಿದೆ.

error: Content is protected !!
Scroll to Top