ಪುತ್ತೂರು: ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಸರಾಫ್ ಮುಳಿಯ ಶ್ಯಾಮ್ ಭಟ್ ಅವರ ಪತ್ನಿ ಸುಲೋಚನ ಶ್ಯಾಮ್ ಭಟ್ (71ವ) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಆ.28ರಂದು ಸಂಜೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತಿ ಮುಳಿಯ ಶ್ಯಾಮ್ ಭಟ್, ಪುತ್ರರಾದ ಮುಳಿಯ ಜ್ಯುವೆಲ್ಸ್ನ ಸಿಎಂಡಿ ಕೇಶವ ಪ್ರಸಾದ್ ಮುಳಿಯ, ಎಂಡಿ ಕೃಷ್ಣನಾರಾಯಣ ಮುಳಿಯ, ಪುತ್ರಿ ಡಾ.ವಿದ್ಯಾ ಸರಸ್ಪತಿ, ಸೊಸೆಯಂದಿರಾದ ಕೃಷ್ಣವೇಣಿ ಪ್ರಸಾದ್ ಮುಳಿಯ, ಅಶ್ವಿನಿಕೃಷ್ಣ ಮುಳಿಯ, ಅಳಿಯ ಡಾ.ಶ್ಯಾಮ್ ಸುಂದರ್ ಮತ್ತು ಮೊಮ್ಮಕ್ಕಳಾದ ಆಶುಲ್ ತೇಜಸ್ವಿ, ಆ ಸುಲೋಚನಾ, ಆಶಾ ಸುಲೋಚನಾ, ಆಪೂರ್ವ ಮನಸ್ವಿನಿ, ಮುಕುಂದ ಶ್ಯಾಮ್, ಆಪ್ತ ಚಂದ್ರಮತಿ ಅವರನ್ನು ಆಗಲಿದ್ದಾರೆ.
ಅವರ ಅಂತ್ಯಕ್ರಿಯೆ ಇಂದು ಬೆಳೆಗ್ಗೆ ನಡೆಯಲಿದೆ.
























