ಪುತ್ತೂರು: ಶ್ರೀ ದೇವತಾ ಸಮಿತಿ ವತಿಯಿಂದ 68ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಬುಧವಾರ ಕಿಲ್ಲೇ ಮೈದಾನದಲ್ಲಿ ಚಾಲನೆ ನೀಡಲಾಯಿತು.
ಬೆಳಿಗ್ಗೆ 11 ಗಂಟೆಗೆ ಕೋರ್ಟಿರೋಡಿನಲ್ಲಿರುವ ವಿಶ್ವ ಸಂಕೀರ್ಣದಿಂದ ಶ್ರೀ ಗಣಪತಿಯ ವಿಗ್ರಹ ಮೆರವಣಿಗೆ ಮೂಲಕ ಹೊರಟು ಕಿಲ್ಲೇ ಮೈದಾನಕ್ಕೆ ತೆರಳಿ ಅಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.
ಮಧ್ಯಾಹ್ನ ಮಹಾಪೂಜೆ ನಡೆದು ಬಳಿಕ ಪ್ರಸಾದ ವಿತರಣೆಯಾಯಿತು. ಬಳಿಕ ಅನ್ನಸಂತರ್ಪಣೆ ಜರಗಿತು. ಸೆ.2 ರ ತನಕ ಏಳು ದಿನಗಳ ಕಾಲ ಶ್ರೀ ಗಣೇಶೋತ್ಸವ ನಡೆಯಲಿದೆ.
























