ಬೆಂಗಳೂರು: ಸತ್ಯ ಹೇಳಿದರೆ ಅದನ್ನು ಸಹಿಸುವ ಶಕ್ತಿ ಕೆಲವರಿಗೆ ಇರುವುದಿಲ್ಲ. ಆದ್ದರಿಂದ ನಾನು ಮಾತನಾಡದೆ ಇರುವುದೇ ಉತ್ತಮ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
ಸದನವೂ ಸೇರಿದಂತೆ ನಾನು ಎಲ್ಲಿ ಏನೇ ಮಾತನಾಡಲಿ, ಅದರಲ್ಲಿ ಕೇವಲ ತಪ್ಪು ಕಂಡು ಹಿಡಿಯುವುದೇ ಬೇರೆಯವರ ಕೆಲಸವಾಗಿದೆ. ರಾಜಕೀಯದವರು, ಪ್ರಮೋದ ದೇವಿಯವರು, ಯದುವೀರ್ ಅವರು, ವಿಧಾನಸಭೆಯಲ್ಲಿ ಹೀಗೆ ನನ್ನ ಮಾತುಗಳನ್ನು ತಪ್ಪು ಹುಡುಕುವುದೇ ಆಗಿದೆ ಎಂದಿದ್ದಾರೆ.
ಈ ಕಾರಣದಿಂದ ನಾನು ಮಾತನಾಡದೆ ಇರುವುದೇ ಉತ್ತಮ ಎಂದು ಕಾಣುತ್ತದೆ. ಈ ವಿಚಾರಗಳನ್ನು ಮಾತನಾಡಲು ಬೇರೆ ನಾಯಕರು, ವಕ್ತಾರರು ಇದ್ದಾರೆ. ಅವರನ್ನು ಸಂಪರ್ಕಿಸಿ ಎಂದು ತಿಳಿಸಿದ್ದಾರೆ.
























