ದೂರು ಹಿಂಪಡೆಯಲು ಮುಂದಾದ ಸುಜಾತ ಭಟ್: ಸಮ್ಮತಿ ನೀಡದ SIT

ಧರ್ಮಸ್ಥಳ: ತನ್ನ ಮಗಳು ಅನನ್ಯ ಭಟ್ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾಳೆ ಎಂದು ದೂರು ನೀಡಿದ ಸುಜಾತ ಭಟ್ ಅವರು ಇಂದು SIT ತನಿಖೆಗೆ ಹಾಜರಾಗಿದ್ದಾರೆ‌.

ಆ. 27 ರಂದು ಸುಜಾತ ಭಟ್ ಅವರನ್ನು SIT ಅಧಿಕಾರಿಗಳು ಬೆಳಗ್ಗೆ 10 ಗಂಟೆಯಿಂದ ರಾತ್ರಿ 9.30 ರ ವರೆಗೆ ವಿಚಾರಣೆ ನಡೆಸಿದ್ದರು.

SIT ಅಧಿಕಾರಿಗಳು ಕಳೆದ ಮೂರು ದಿನಗಳಿಂದಲೂ ಸುಜಾತ ಭಟ್ ಅವರನ್ನು ವಿಚಾರಣೆ ನಡೆಸುತ್ತಿದ್ದು, ಇದರಿಂದ ಬೇಸತ್ತ ಅವರು ತಾವು ನೀಡಿರುವ ದೂರನ್ನು ಹಿಂಪಡೆಯುವುದಾಗಿಯೂ ಹೇಳಿದ್ದಾರೆ. ಆದರೆ SIT ಅಧಿಕಾರಿಗಳು ಇದಕ್ಕೆ ಅವಕಾಶ ನೀಡದೆ ವಿಚಾರಣೆ ಮುಂದುವರೆಸಿದ್ದಾರೆ.





















































 
 

ಅಧಿಕಾರಿಗಳು ಸುಜಾತ ಅವರಿಂದ ಸುಳ್ಳು ದೂರು ನೀಡಿರುವುದರ ಹಿಂದಿನ ಉದ್ದೇಶ, ಇದಕ್ಕೆ ಕುಮ್ಮಕ್ಕು ನೀಡಿದವರು, ಆದಾಯ, ಅವರ ಹಿನ್ನೆಲೆ ಕುರಿತು ಮಾಹಿತಿ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

error: Content is protected !!
Scroll to Top