ಚಾಮುಂಡಿ ಬೆಟ್ಟ ವಕ್ಫ್‌ ಆಸ್ತಿಯೇ? : ಡಿ.ಕೆ.ಶಿವಕುಮಾರ್‌ ವಿರುದ್ಧ ಶೋಭಾ ಕರಂದ್ಲಾಜೆ ಕಿಡಿ

ಕಾಂಗ್ರೆಸ್‌ ಹೈಕಮಾಂಡ್‌ ಮೆಚ್ಚಿಸಲು ಹಿಂದೂ ವಿರೋಧಿ ಹೇಳಿಕೆ ನೀಡುತ್ತಿರುವ ಡಿಕೆಶಿ ಎಂದು ಆರೋಪ

ಬೆಂಗಳೂರು: ಚಾಮುಂಡೇಶ್ವರಿ ಹಿಂದೂಗಳ ಆಸ್ತಿ ಅಲ್ಲ ಎಂದಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಹೇಳಿಕೆ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದೆ. ಆರ್‌ಎಸ್‌ಎಸ್‌ ಗೀತೆ ಹಾಡಿ ಕಾಂಗ್ರೆಸ್‌ ಹೈಕಾಂಡ್‌ ಕೆಂಗಣ್ಣಿಗೆ ಗುರಿಯಾಗಿರುವ ಡಿಕೆಶಿ ಈಗ ಹೈಕಮಾಂಡನ್ನು ಮೆಚ್ಚಿಸಲು ಹಿಂದೂಗಳನ್ನು ಅಣಕಿಸುತ್ತಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗಿವೆ.

ರಾಜ್ಯದಲ್ಲಿ 3500ಕ್ಕೂ ಹೆಚ್ಚು ದೇವಸ್ಥಾನಗಳು ಹಿಂದೂಗಳ ಆಸ್ತಿ. ಸರ್ಕಾರದ ಆಸ್ತಿ ಎಂದರೆ ಮುಜುರಾಯಿ ಆಸ್ತಿ, ಮುಜುರಾಯಿ ಆಸ್ತಿಯಾದರೆ ಅದು ಹಿಂದೂಗಳ ಆಸ್ತಿ ಅಲ್ವ. ಸರ್ಕಾರದ ಆಸ್ತಿ ಹಿಂದೂಗಳದ್ದೂ ಅಲ್ಲ ಅಂದ್ರೆ ಏನು ಹೇಳಲು ಹೊರಟಿದ್ದಾರೆ. ಡಿ.ಕೆ ಶಿವಕುಮಾರ್ ಅವರಿಗೆ ಏನಾಗಿದೆ ನಿಮಗೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.





















































 
 

ಡಿಕೆಶಿ ಅವರೇ ನೀವು ಮುಖ್ಯಮಂತ್ರಿಯಾಗುವ ಭರದಲ್ಲಿ ಹಿಂದೂಗಳಿಗೆ ಅಪಮಾನ ಮಾಡುತ್ತಿದ್ದೀರಿ. ಹಿಂದೂಗಳ ವಿಚಾರದಲ್ಲಿ ಸಂಶಯ ಹುಟ್ಟು ಹಾಕುತ್ತಿದ್ದೀರಿ. ಸರ್ಕಾರವನ್ನು ನೀವು ಬಿಟ್ಟು ಹೋಗಿ. ಹಿಂದೂ ಮಾನಸಿಕತೆ ಇರುವವರು ಬಂದು ಆಡಳಿತ ಮಾಡ್ತಾರೆ ಎಂದು ಕಿಡಿಕಾರಿದ್ದಾರೆ.

ಭಾನು ಮುಸ್ತಾಕ್ ಅವರ ಬಗ್ಗೆ ವಿರೋಧ ಇಲ್ಲ. ಕನ್ನಡಾಂಬೆಯನ್ನು ಒಪ್ಪದವರು ಚಾಮುಂಡೇಶ್ವರಿಯನ್ನು ಒಪ್ಪುತ್ತಾರಯೇ? ಹಳದಿ ಮತ್ತು ಕುಂಕುಮವನ್ನು ಒಪ್ಪಿಲ್ಲ ಅಂದರೆ ಇದನ್ನು ಒಪ್ಪುತ್ತಾರಾ ಎನ್ನುವುದಷ್ಟೇ ಪ್ರಶ್ನೆ ಎಂದಿದ್ದಾರೆ.

ಕರ್ನಾಟಕದಲ್ಲಿ ಬೇರೆ ಸಾಹಿತಿ ಸಿಗಲಿಲ್ವ? ಕನ್ನಡಾಂಬೆಯನ್ನು ಒಪ್ಪದವರಿಗೆ ಯಾಕೆ ಅವಕಾಶ ನೀಡಬೇಕು ಎಂದು ಕೇಳಿದ್ದೆ. ಮಹಾದೇವಪ್ಪ ಇದನ್ನು ಧಾರ್ಮಿಕ ಅಲ್ಲ ಸಾಂಸ್ಕೃತಿಕ ಹಬ್ಬ ಎಂದು ಹೇಳಿದ್ದರು. ದಸರಾ ಸಾಂಸ್ಕೃತಿಕ ಹಬ್ಬ ಎಂದು ಯಾವಾಗ ಆಯ್ತು? ನವರಾತ್ರಿ ಎಂದರೆ ದೇವಿಯ ಒಂಭತ್ತು ಅವತಾರಗಳು. ಮೈಸೂರು ರಾಜರು ಇದನ್ನು ಇನ್ನಷ್ಟು ವಿಜೃಂಭಣೆಯಿಂದ ಆಚರಿಸುತ್ತಾ ಬಂದಿದ್ದಾರೆ ಎಂದು ಹೇಳಿದ್ದಾರೆ.

ಈಗ ಚಾಮುಂಡೇಶ್ವರಿ ಮೇಲೆ ನಂಬಿಕೆ ಇಲ್ಲದವರ ಕಡೆಯಿಂದ ಉದ್ಘಾಟನೆ ಮಾಡಿಸುತ್ತಿದ್ದಾರೆ. ಈ ಮೂಲಕ ಹಿಂದೂಗಳಿಗೆ ಅವಮಾನ ಮಾಡ್ತಿದ್ದಾರೆ. ಡಿ.ಕೆ ಶಿವಕುಮಾರ್ ಅವರು ಹೊಸ ವಿವಾದ ಹುಟ್ಟು ಹಾಕಿದ್ದಾರೆ. ಚಾಮುಂಡೇಶ್ವರಿ ಮತ್ತು ಚಾಮುಂಡಿ ಬೆಟ್ಟ ಕೇವಲ ಹಿಂದೂಗಳ ಆಸ್ತಿ ಅಲ್ಲ ಎಂದು ಡಿಕೆಶಿ ಹೇಳಿದ್ದಾರೆ. ಹಾಗಿದ್ರೆ ಇದು ಯಾರ ಆಸ್ತಿ? ಟಿಪ್ಪು ಆಡಳಿತ ಮಾಡಿದ ಅನ್ನೊ ಕಾರಣಕ್ಕೆ ಅದು ವಕ್ಫ್ ಆಸ್ತಿಯೇ ಎಂದು ಪ್ರಶ್ನಿಸಿದ್ದಾರೆ.

ಹಿಂದೆಯೇ ಹಲವು ರೈತರ ಜಮೀನು ವಕ್ಫ್ ಆಸ್ತಿ ಎಂದು ಘೋಷಿಸಲಾಯಿತು. ಈಗ ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿ ಅಲ್ಲ ಎನ್ನುತ್ತಾರೆ. ಇದು ಕಾಂಗ್ರೆಸ್ ನಾಯಕರ ವ್ಯವಸ್ಥಿತ ಷಡ್ಯಂತ್ರ. ಆರ್‌ಎಸ್‌ಎಸ್ ಹೇಳಿಕೆಯಿಂದ ಹೊರಬರಲು ಇಂತಹ ಹೇಳಿಕೆ ನೀಡುತ್ತಿದ್ದಾರೆ. ಹೈಕಮಾಂಡ್ ಮೆಚ್ಚಿಸಲು ಇಂತಹ ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೂ ಧಾರ್ಮಿಕ ನಂಬಿಕೆಗಳು ಇಲ್ಲ. ಇದಕ್ಕಾಗಿಯೇ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದ್ದಾರೆ. ಹಿಂದೂಗಳ ಆಸ್ತಿ ಅಲ್ಲ ಎನ್ನಲು ಎಷ್ಟು ಧೈರ್ಯ? ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ದಿವಾಳಿಯಾಗಿದ್ದಾರೆ. ಹಿಂದೂ ವಿರೋಧಿ ಮನಸ್ಥಿತಿಗೆ ಕುಮ್ಮಕ್ಕು ನೀಡಲಾಗುತ್ತಿದೆ. ಚಾಮುಂಡಿ ಬೆಟ್ಟದ ವಿರೋಧ ಇರುವ ಮನಸ್ಥಿತಿಯವರಿಗೆ ದೇವರು ಪಾಠ ಕಲಿಸುತ್ತಾನೆ ಎಂದಿದ್ದಾರೆ.

error: Content is protected !!
Scroll to Top