ಬೆಂಗಳೂರು: ಗಾಳಿ, ಬೆಳಕು, ನೀರಿಗೆ ಹೇಗೆ ಯಾವುದೇ ಜಾತಿ ಧರ್ಮ ಇಲ್ಲವೋ ಹಾಗೆಯೇ ಯಾವುದೇ ದೇವರಿಗೂ ಸಹ ಧರ್ಮವಿಲ್ಲ. ಪ್ರಾರ್ಥನೆ ಯಾರೊಬ್ಬರ ಸೊತ್ತು ಅಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನಾನು ನಂಬಿದ ಗುರುಗಳು ಮಾನವ ಧರ್ಮದ ಮೂಲಕ ಜಗತ್ತಿಗೆ ಶಾಂತಿ ಎಂದು ಹೇಳಿದ್ದಾಗಿ ಅವರು ತಿಳಿಸಿದ್ದಾರೆ.
ಚಾಮುಂಡೇಶ್ವರಿ ಎಲ್ಲಾ ಧರ್ಮದವರಿಗೂ ಆಶೀರ್ವಾದ ಮಾಡುವ ದೇವರು. ರಾಜವಂಶಸ್ಥರು ಮತ್ತು ಆಮೇಲೆ ಬಂದ ಸರ್ಕಾರ ಚಾಮುಂಡೇಶ್ವರಿಯನ್ನು ನಾಡ ದೇವಿ ಎಂದು ಕರೆದಿದ್ದಾರೆ. ಈ ದೇವಾಲಯ ಸಾರ್ವಜನಿಕರ ಆಸ್ತಿ. ನಾಡ ಧ್ವಜ, ನಾಡ ದೇವಿಗೆ ಜಾತಿ, ಧರ್ಮದ ಬಣ್ಣ ಲೇಪಿಸುವ ಅಗತ್ಯ ಇಲ್ಲ ಎಂದು ಅವರು ನುಡಿದಿದ್ದಾರೆ.
























