ಪ್ರಿಯತಮನ ಜೊತೆ ಸೇರಿ ಅತ್ತೆಯನ್ನೇ ಕೊಂದ ಖತರ್ನಾಕ್ ಸೊಸೆ ಪೊಲೀಸ್ ವಶಕ್ಕೆ

ಚಿಕ್ಕಮಗಳೂರು: ರಾಗಿ ಮುದ್ದೆಯಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ತೆಯನ್ನು ಸೊಸೆಯೊಬ್ಬಳು ಹತ್ಯೆ ಮಾಡಿದ ಘಟನೆ ಅಜ್ಜಂಪುರದ ತಡಗ ಗ್ರಾಮದಲ್ಲಿ ನಡೆದಿದೆ.

ಪ್ರಿಯಕರ ಆಂಜನೇಯ ಎಂಬಾತನ ಜೊತೆ ಸೇರಿ ಸೊಸೆ ಅಶ್ವಿನಿ ಎಂಬಾಕೆ ಈ ಕುಕೃತ್ಯ ಎಸಗಿದ್ದು, ಬಳಿಕ ಚಿನ್ನಾಭರಣ ಕಳವು ಮಾಡಿದ್ದು, ಸದ್ಯ ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ. ದೋಚಿದ್ದ ಚಿನ್ನಾಭರಣವನ್ನು ಪೊಲೀಸರು ಸುಪರ್ದಿಗೆ ತೆಗೆದುಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಅಶ್ವಿನಿಯ ಅತ್ತೆ ದೇವೀರಮ್ಮ ಮೃತಪಟ್ಟಿದ್ದು, ಇದನ್ನು ಸಹಜ ಮರಣ ಎಂದು ಭಾವಿಸಿ ಕುಟುಂಬಸ್ಥರು ಅಂತ್ಯಸಂಸ್ಕಾರ ನಡೆಸಿದ್ದರು. ಆದರೆ ಆ ಬಳಿಕ ಮನೆಯಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಾಣೆಯಾಗಿದ್ದು ಗಮನಕ್ಕೆ ಬಂದು ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಬಗ್ಗೆ ಮನೆಯವರನ್ನು ಪೊಲೀಸರು ತನಿಖೆ ಮಾಡಿದ ಸಂದರ್ಭದಲ್ಲಿ ಅಶ್ವಿನಿ ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡಿದ್ದು, ಇದರಿಂದ ಅನುಮಾನಗೊಂಡ ಪೊಲೀಸರು ಆಕೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಹೊರಬಂದಿದೆ.





















































 
 

ಅತ್ತೆಯನ್ನು ಕೊಂದು ಸುಮಾರು 20 ಲಕ್ಷದ ಚಿನ್ನಾಭರಣವನ್ನು ಪ್ರಿಯಕರನಿಗೆ ನೀಡಿದ್ದಾಗಿ ತಿಳಿಸಿದ್ದಾಳೆ‌. ಆರೋಪಿಗಳನ್ನು ಪೊಲೀಸರು ಬಂಧಿಸಿ, ಚಿನ್ನಾಭರಣ, ಟಿಟಿ ವಾಹನ ವಶಕ್ಕೆ ಪಡೆದಿದ್ದಾರೆ.

error: Content is protected !!
Scroll to Top