ಡಿಕೆಶಿ ಬಗ್ಗೆ ಹೈಕಮಾಂಡ್‌ ಮೃದು ಧೋರಣೆ ತಾಳಿದೆ: ಸತೀಶ್ ಜಾರಕಿಹೊಳಿ

ಬಾಗಲಕೋಟೆ: ರಾಜ್ಯದಲ್ಲಿ ನಡೆಯುವ ಎಲ್ಲಾ ವಿಷಯಗಳು ರಾಹುಲ್ ಗಾಂಧಿಯನ್ನು ತಲುಪುವುದಿಲ್ಲ. ಕೆಲವು ವಿಷಯಗಳಷ್ಟೇ ತಲುಪುತ್ತವೆ. ಎಲ್ಲಾ ವಿಷಯಗಳು ಹೈಕಮಾಂಡ್‌ಗೆ ತಿಳಿಯುವಂತಾಗಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಡಿಕೆಶಿ ಅವರು ಸದನದಲ್ಲಿ RSS ಗೀತೆ ಹಾಡಿರುವುದಕ್ಕೆ ಅವರೇ ಉತ್ತರಿಸಬೇಕು. ನಾನು ಈ ಬಗ್ಗೆ ಮಾತನಾಡಲು ಆಗುವುದಿಲ್ಲ. ಈ ಬಗ್ಗೆ ಸಿ ಎಂ ಸಿದ್ದರಾಮಯ್ಯ, ಪಕ್ಷದ ಹೈಕಮಾಂಡ್ ಚರ್ಚೆ ಮಾಡಬೇಕು. ನಮ್ಮ ಮಟ್ಟದಲ್ಲಿ ಆಗಬೇಕಾದ ಚರ್ಚೆಯಲ್ಲ. ಈ ಎಲ್ಲ ವಿಷಯಗಳನ್ನು ರಾಹುಲ್ ಗಾಂಧಿಗೆ ತಲುಪಿಸುವ ಕಾರ್ಯ ಆಗಬೇಕು ಎಂದು ತಿಳಿಸಿದ್ದಾರೆ.

ಸಚಿವ ರಾಜಣ್ಣ ಅವರ ಹೇಳಿಕೆಯನ್ನು ತಿರುಚಿ ಹೈಕಮಾಂಡ್‌ಗೆ ರವಾನಿಸಲಾಗಿದೆ. ಅದನ್ನು ಮನವರಿಕೆ ಮಾಡುವ ಕೆಲಸ ನಡೆಯಬೇಕಿದೆ. ಡಿಕೆಶಿ ಬಗ್ಗೆ ಹೈಕಮಾಂಡ್ ಮೃದು ಧೋರಣೆ ತಾಳಿದೆ. ನಮಗೊಂದು ನ್ಯಾಯ, ಅವರಿಗೊಂದು ‌ನ್ಯಾಯವಾ ಎಂದು ರಾಜಣ್ಣ ಪ್ರಶ್ನೆ ಮಾಡಿದ್ದಾರೆ .ಹೈಕಮಾಂಡ್ ಇದೆಲ್ಲವನ್ನು ಗಮನಿಸಬೇಕು ಎಂದಿದ್ದಾರೆ.





















































 
 
error: Content is protected !!
Scroll to Top