ಪುತ್ತೂರು: ಧರ್ಮಸ್ಥಳದ ವಿರುದ್ಧದ ಅಪಪ್ರಚಾರ, ವಿರೋಧ ಆಗುತ್ತಿರುವ ಸಂದರ್ಭ ಕ್ಷೇತ್ರದ ಜೊತೆಗೆ ನಾವಿದ್ದೇವೆ ಎಂಬುದನ್ನು ಸಾರಲು ಮಾಜಿ ಸಂಸದ ಹಾಗೂ ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ದ.ಕ. ಜಿಲ್ಲೆಯ ಎಲ್ಲಾ ಮಂಡಲಗಳಿಂದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಮಧ್ಯಾಹ್ನ ಧರ್ಮ ಜಾಗೃತಿಯ ಬೃಹತ್ ಯಾತ್ರೆ ನಡೆಯಿತು.
ಪುತ್ತೂರಿನಿಂದ 150ಕ್ಕೂ ಹೆಚ್ಚು ವಾಹನ ಧರ್ಮಸ್ಥಳಕ್ಕೆ ತೆರಳಿದೆ.

ಇತಿಹಾಸ ಪ್ರಸಿದ್ದ ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಕೊನೆಯಲ್ಲಿ ಧರ್ಮ ಜಾಗೃತಿ ಯಾತ್ರೆಗೆ ತೆಂಗಿನ ಕಾಯಿ ಒಡೆದು ಚಾಲನೆ ನೀಡಲಾಯಿತು. ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ ತೆಂಗಿನ ಕಾಯಿ ಒಡೆಯುವ ಮೂಲಕ ಯಾತ್ರೆಗೆ ಚಾಲನೆ ನೀಡಿದರು.
ಈ ಸಂದರ್ಭ ಮಾಜಿ ಸಂಸದರಾಗಿರುವ ಧರ್ಮಸ್ಥಳದ ಪರವಾಗಿ ನಡೆಯುವ ಸಮಾವೇಶದ ಕೇಂದ್ರ ಸಮಿತಿ ಉಸ್ತುವಾರಿ ಹೊಂದಿರುವ ನಳಿನ್ ಕುಮಾರ್ ಕಟೀಲ್, ಪುತ್ತೂರು ತಾಲೂಕು ಜನಾಗ್ರಹ ಸಮಾವೇಶದ ಉಸ್ತುವಾರಿ ದ.ಕ.ಜಿಲ್ಲಾಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಗೊಟ್ಟು, ಬಿಜೆಪಿಯ ಹಿರಿಯರಾದ ಚನಿಲ ತಿಮ್ಮಪ್ಪ ಶೆಟ್ಟಿ, ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದು ಸಂಘಟನೆಗಳ ಮುಖಂಡ ಮುರಳಿಕೃಷ್ಣ ಹಸಂತಡ್ಕ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ನಗರಸಭಾ ಸದಸ್ಯ ಕೆ.ಜೀವಂಧರ್ ಜೈನ್, ರಾಜೇಶ್ ಬನ್ನೂರು, ನಾಗೇಂದ್ರ ಬಾಳಿಗ, ನಿರಂಜನ್, ಶಶಿಧರ್ ನಾಯಕ್,, ಸುರೇಶ್ ಆಳ್ವ, ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಉಜಿರೆಮಾರು,ಹರಿಪ್ರಸಾದ್ ಯಾದವ,ಚಂದ್ರಶೇಖರ ಬಪ್ಪಳಿಗೆ,ನಿತೇಶ್ ಶಾಂತಿವನ, ಹರೀಶ್ ಬಿಜಾತ್ರೆ, ನವೀನ್ ರೈ ಕೈಕಾರ ಸಹಿತ ನೂರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಧರ್ಮಸ್ಥಳಕ್ಕೆ ತೆರಳಿದರು.
























