ಸವಣೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ | ಆರ್ಥಿಕ ವರ್ಷದಲ್ಲಿ 1.67 ಕೋಟಿ ರೂ. ಲಾಭ | ಸದಸ್ಯರಿಗೆ ಶೇ.14 ಡಿವಿಡೆಂಡ್‍ : ತಾರನಾಥ ಕಾಯರ್ಗ

ಸವಣೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2034-25ನೇ ಸಾಲಿನಲ್ಲಿ 412.92 ಕೋಟಿ ರೂ. ವ್ಯವಹಾರ ಮಾಡಿ 1.67 ಕೋಟಿ ರೂ. ಲಾಭಗಳಿಸಿದ್ದು, ಸದಸ್ಯರಿಗೆ ಶೇ. 14 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ಹೇಳಿದರು.

ಅವರು ಭಾನುವಾರ ಸಂಘದ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸದಸ್ಯರ ಸಹಕಾರದಿಂದಾಗಿ ಸಂಘವು ಸತತವಾಗಿ 23ನೇ ಬಾರಿಗೆ ಅಡಿಟ್‍ ನಲ್ಲಿ ಎ ಗ್ರೇಡ್ ಪಡೆದುಕೊಂಡಿದೆ ಎಂದು ಹೇಳಿದರು.





















































 
 

ಪ್ರತಿ ದಿನ ಮಾಸ್ ಸಂಸ್ಥೆಯ ಮೂಲಕ ಸಂಘದಲ್ಲಿ ಅಡಿಕೆ ಖರೀದಿ ವ್ಯವಹಾರ ಮಾಡಲಾಗುತ್ತಿದ್ದು, 2024-25ನೇ ಸಾಲಿನಲ್ಲಿ ರೈತರ ಸಹಕಾರದೊಂದಿಗೆ 4.89 ಕೋಟಿ ರೂ. ವ್ಯವಹಾರ ಮಾಡಲಾಗಿದೆ ತಾರಾನಾಥ ಕಾಯರ್ಗ ತಿಳಿಸಿದರು.

ಸಹಕಾರ ರತ್ನ ಸವಣೂರು ಕೆ.ಸೀತಾರಾಮ ರೈ ಮಾತನಾಡಿ, ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ಮತ್ತು ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು ಹಾಗೂ ನಿರ್ದೇಶಕರುಗಳು, ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಮತ್ತು ಸಿಬ್ಬಂದಿ ವರ್ಗದ ಪ್ರಾಮಾಣಿಕ ಕೆಲಸದಿಂದ ಸಂಘ ಒಳ್ಳೆಯ ವ್ಯವಹಾರವನ್ನು ಮಾಡಿ, 1.67 ಕೋಟಿ ರೂ ಲಾಭವನ್ನು ತಂದಿರುವುದು ತುಂಬಾ ಸಂತೋಷ ತಂದಿದೆ. ಜೊತೆಗೆ ಸಮಾಜ ಸಹ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಸಾಧಕರನ್ನು ಗುರುತಿಸುವ ಕಾರ್ಯವನ್ನು ಶ್ಲಾಘಿಸಿದ ಅವರು, ಆಚಾನಕ್ ಆಗಿ ಸವಣೂರು ಪರಿಸರದಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಅಡಿಕೆ, ರೈತರಿಗೆ ತುರ್ತು ಪರಿಹಾರವನ್ನು ನೀಡುವ ಬಗ್ಗೆ ಸಂಘದ ಆಡಳಿತ ಮಂಡಳಿ ಆಲೋ ಫಂಡ್ ವೊಂದನ್ನು ಸ್ಥಾಪಿಸುವುದು ಒಳ್ಳೆಯದು. ಈ ಹಣದಿಂದ ತುರ್ತು ಪರಿಹಾರವನ್ನು ನೀಡಬಹುದು ಎಂದು ಸಲಹೆಯನ್ನು ನೀಡಿದರು.

ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ಮಾತನಾಡಿ, ಉತ್ತಮವಾದ ಅತಿಥ್ಯವನ್ನು ಒಳಗೊಂಡ ಸಂಘದ ಮಹಾಸಭೆಯು ಹಬ್ಬದ ಸಂಭ್ರಮದಂತೆ ಕಂಡು ಬಂದಿದೆ. ರಾಜ್ಯ ಸರಕಾರ ಒಂದು ಅಡಿಕೆ ಮರ ನಾಶವಾದರೆ 16 ರೂಪಾಯಿ ಬೆಲೆ ನಿಗದಿಪಡಿಸಿದೆ. ಇದು ತೀರಾ ಕಡಿಮೆ ಆಗಿದ್ದು, ಇದನ್ನು ಹೆಚ್ಚು ಮಾಡಬೇಕು. ಆಡಿಕೆ ತೋಟದಲ್ಲಿ ಶೇಕಡಾ 33 ರಷ್ಟು ಹಾನಿ ಆದರೆ ಮಾತ್ರ ಪರಿಹಾರ ಎಂಬ ಸರಕಾರದ ನಿಯಮವನ್ನು ತಿದ್ದುಪಡಿ ಮಾಡಿ, ಕಡಿಮೆ ಹಾನಿಯಾದಾಗಲ್ಲೂ ಪರಿಹಾರವನ್ನು ನೀಡುವಂತೆ ಈ ಮಹಾಸಭೆಯ ಮೂಲಕ ನಿರ್ಣಯ ಮಾಡಬೇಕು ಎಂದು ಹೇಳಿದರು.

ವಿಮಾ ಯೋಜನೆಯ ಬಗ್ಗೆ ಅರಿಯಡ್ಕ ಕೃಷ್ಣ ರೈ ತಳಮನೆ ಪುಣ್ಯಪಾಡಿರವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್‌, ಈಗ ಮಂಗಳೂರಿನ ಆಸ್ಪತ್ರೆಗಳಲ್ಲಿ ಮಾತ್ರ ಯಶಸ್ವಿನಿ ಯೋಜನೆಯ ಸೌಲಭ್ಯ ಸಿಗುತ್ತದೆ. ಈ ಸೌಲಭ್ಯ ಪುತ್ತೂರಿನಲ್ಲೂ ಸಿಗುವಂತೆ ಆಗಬೇಕು. ಈ ಬಗ್ಗೆ ಹಲವು ಸಲ ಮನವಿಯನ್ನು ಮಾಡಲಾಗಿದೆ. ಈ ಮಹಾಸಭೆಯಲ್ಲಿ ಮತ್ತೊಮ್ಮೆ ನಿರ್ಣಯವನ್ನು ಮಾಡಿ ಪ್ರತ್ತೂರಿನಲ್ಲಿ ಯಶಸ್ವಿನಿ ಯೋಜನೆಗೆ ಆಸ್ಪತ್ರೆಯ ಸೌಲಭ್ಯ ಸಿಗುವಂತೆ ಒತ್ತಾಯಿಸಲಾಗುವುದು ಎಂದರು.

ಸವಣೂರು ಗ್ರಾ.ಪಂ. ಸದಸ್ಯ ಗಿರಿಶಂಕರ್ ಸುಲಾಯ ದೇವಸ್ಯ ಮಾತನಾಡಿ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಲಾಗಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಮುಂದೆ ಉದ್ಯೋಗ ಸಿಕ್ಕಿದ ನಂತರ ಪ್ರಥದು ತಿಂಗಳ ಸಂಬಳವನ್ನು ಇದೇ ಸಹಕಾರ ಸಂಘದಲ್ಲಿ ಠೇವಣಿಯನ್ನು ಇಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಬೆಳಂದೂರು ಶಾಖಾ ಕಚೇರಿಯ ಗೋದಾಮು ಕಟ್ಟಡವನ್ನು ಉತ್ತಮಗೊಳಿಸುವಂತೆ ನ್ಯಾಯವಾದಿ ಬೈತಡ್ಕ ಶೀನಪ್ಪ ಗೌಡರವರು ಸೂಚಿಸಿದಾಗ ಈ ಬಗ್ಗೆ ಮುಂದೆ ಕ್ರಮ ಕೈಗೊಳ್ಳುತ್ತೇವೆ ಎಂದು ಅಧ್ಯಕ್ಷ ತಾರಾನಾಥ ಕಾಯರ್ಗ ಹೇಳಿದರು. ಕೃಷ್ಣಕುಮಾರ್ ರೈ ದೇವಸ್ಯ, ಪದ್ಮಯ್ಯ ಗೌಡ ಕರಂಡ್ವಾಣಿ, ಸಂಕಪ್ಪರೈ ಕಲಾಯಿ ವಿವಿಧ ಸಲಹೆ-ಸೂಚನೆಯನ್ನು ನೀಡಿದರು.

ಸಂಘದ ನಿರ್ದೇಶಕರಾದ ಗಣೇಶ್ ನಿಡ್ವಣ್ಣಾಯ ಯನ್. ಕುಮಾರಮಂಗಲ, ಉದಯರೈ ಮಾದೋಡಿ, ಚೆನ್ನಪ್ಪಗೌಡ ನೂದೆ, ಅಶ್ವಿನ್ ಎಲ್. ಶೆಟ್ಟಿ, ಪ್ರಕಾಶ್ ರೈ ಸಾರಕರೆ, ಶಿವಪ್ರಸಾದ್ ಎಂ.ಎಸ್ ಕಳುವಾಜೆ, ಜ್ಞಾನೇಶ್ವರಿ, ಸೀತಾಲಕ್ಷ್ಮಿ, ಗಂಗಾಧರ ಹರಿಯಡ್ಕ, ತಿಮ್ಮಪ್ಪ ಬನಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ಸ್ವಾಗತಿಸಿ, ಉಪಾಧ್ಯಕ್ಷಚೇತನ್ ಕುಮಾರ್ ಕೋಡಿಬೈಲು ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ ಕಾರ್ಯಕ್ರಮ ನಿರೂಪಿಸಿದರು, ಉಪ ಕಾರ್ಯನಿರ್ವಾಹಣಾಧಿಕಾರಿ ಜಲಜಾ ಎಚ್‍. ವಿ. ವರದಿ ವಾಚಿಸಿದರು. ಪ್ರಕಾಶ್ ಕೆಡೆಂಜಿ ಪ್ರಾರ್ಥನೆಗೈದರು.

ರೈ ಸವಣೂರು ಸುಬ್ಬಣ್ಣರೆ ಖಂಡಿಗೆ, ಶ್ರೀಧರ್ ರೈ ಮಾದೋಡಿ, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಸವಣೂರು ಪ್ರಾ.ಕೃ.ಪತ್ತಿನ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷ ಸತೀಶ್ ಕುಮಾರ್ ಕೆಡೆಂಜ್, ಮಾಜಿ ನಿರ್ದೇಶಕರಾದ ತನಿಯಪ್ಪ ನಾಯ್ಡ್ ಕಾರ್ಲಾಡಿ, ಸೋಮನಾಥ ಕನ್ಯಾಮಂಗಲ, ಸವಣೂರು ಬನಸ ರಬ್ಬರ್ ಸೊಸೈಟಿ ಅಧ್ಯಕ್ಷ ಕಡೆಂಜಗುತ್ತು ಪ್ರವೀಣ್‍ ಕುಮಾರ್‍, ಕಾರ್ಯದರ್ಶಿ ಅಚ್ಚುತ, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಈ ಕೃಷ್ಣ ಭಟ್ ಕುಕ್ಕುಜೆ, ಮಾಜಿ ಅಧ್ಯಕ್ಷೆ ಮಮತಾ ರೈ ದೇವಸ್ಯ, ನಿರ್ದೇಶಕರಾದ ಪ್ರೇಮಚಂದ್ರ ಮೆದು, ಗಂಗಾಧರ ಸುಣ್ಣಾಜೆ, ಜಿ.ಪಂ. ಮಾಜಿ ಸದಸ್ಯರಾದ ಶಿವಣ್ಣ ಗೌಡ ಇಡ್ಯಾಡಿ, ಪ್ರಮೀಳಾ ಜನಾರ್ದನ್, ಸಂಘದ ಕಾನೂನು ಸಲಹೆಗಾರರಾದ ಮಹೇಶ್ ಕೆ.ಸವಣೂರು, ಸೂರನಾರಾಯಣ ಭಟ್, ನ್ಯಾಯದಾದಿಗಳಾದ ಮಹಾಬಲ ಶೆಟ್ಟಿ ಕೊದ್ದುಂಡ, ಅವಿನಾಶ್ ಬೈತಡ್ಕ, ಮಾಸ್ ಸಂಸ್ಥೆಯ ನಿರ್ದೇಶಕಿ ಸುಧಾ ಎಸ್ ರೈ ಪುಣ್ಯಸ್ಟಾಡಿ, ಸವಣೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಬಿ.ಕೆ, ಸದಸ್ಯರಾದ ತೀರ್ಥರಾಮ್ ಕಡೆಂಜಿ, ಶೀನಪ್ಪ ಶೆಟ್ಟಿ ನೆಕ್ರಾಜೆ, ರಫೀಕ್ ಮಾಂತೂರು, ಸತೀಶ್ ಅಂಗಡಿಮೂಲೆ, ರಾಜೀವಿ ವಿ. ಶೆಟ್ಟಿ ಕೆಡೆಂಜಿ, ತೀರ್ಥರಾಮ್ ಕೆಡೆಂಜಿ, ಬಾಬು ಎನ್. ಚೆನ್ನು ಮುಂಡೋತಡ್ಕ, ಚಂದ್ರಾವತಿ ಸುಣ್ಣಾಜೆ, ಮಾಜಿ ಸದಸ್ಯ ಸತೀಶ್‍ ಬಲ್ಯಾಯ, ಡಿ.ಎಲ್.ಗಾಂಭೀರ ದೇವಸ್ಯ, ನಾಗರಾಜ್ ನಿಡ್ವಣ್ಣಾಯ, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ,

ಆಡಳಿತಾಧಿಕಾರಿ ವಸಂತ್ ರೈ ಕಾರ್ಕಳ, ಬೆಳಂದೂರು ಗ್ರಾ.ಪಂ ಅಧ್ಯಕ್ಷೆ ತೇಜಾಕ್ಷಿ ಕೊಡಂಗೆ, ಉಪಾಧ್ಯಕ್ಷ ಜಯಂತ ಅಬೀರ, ಸದಸ್ಯ ಮೋಹನ್ ಆಗಳಿ, ಮಾಜಿ ಸದಸ್ಯ ಸಂಪತ್ ಕುಮಾರ್ ರೈ ಪಾತಾಜೆ, ಭಾಸ್ಕರ್ ಗೌಡ ಕಳುವಾಜೆ, ಸೀತಾರಾಮ ಗೌಡ ಮುಂಡಾಳ, ಸಂತೋಷ್ ಕುಮಾರ್ ಮರಕಡ, ಯಶದಂತ ಕಳುವಾಜೆ, ಚಂದ್ರಯ್ಯ ಆಚಾರ್, ಬರೆಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜತ್ತಪ್ಪ ಬರೆಪ್ಪಾಡಿ, ಮಾಜಿ ಅಧ್ಯಕ್ಷ ವಿಠಲ ಗೌಡ ಬರೆಪ್ಪಾಡಿ, ಸವಣೂರು ಯುವಕ ಮಂಡಲ ನಿಕಟಪೂರ್ವ ಅಧ್ಯಕ್ಷ ಜಿತಾಕ್ಷ ಜಿ., ಜಿಲ್ಲಾ ಯುವ ಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಸವಣೂರು ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ನಡುಬೈಲು, ಮಾಜಿ ಅಧ್ಯಕ್ಷ ಸೀತಾರಾಮ ಗೌಡ ಮೆದು, ಶ್ರೀಧರ್ ಸುಣ್ಣಾಜೆ, ಜನಾರ್ದನ್ ಆಚಾರ್ ಕಾಣಿಯೂರು, ಸಹಣೂರು ಪ್ರಾಥಮಿಕ ಶಾಲಾ ಎಸ್‌ ಡಿಎಂಸಿ ಅಧ್ಯಕ್ಷ ಅಶ್ರಫ್ ಜನತಾ, ಮಾಜಿ ಅಧ್ಯಕ್ಷ ಚಂದ್ರಶೇಖರ್ ಗೌಡ ಮೆದು, ಅನ್ನಪೂರ್ಣ ಪ್ರಸಾದ್ ರೈ ಬೈಲಾಡಿ, ವಿಠಲ ಶೆಟ್ಟಿ ಬಂಬಲ, ತಾ.ಪಂ ಮಾಜಿ ಸದಸ್ಯರಾದ ವಿಜಯ ಈಶ್ವರ ಗೌಡ ಕಾಯರ್ಗ, ಲಲಿತಾ ಈಶ್ವರ್, ನಾಗೇಶ್ ಕೆಡೆಂಜಿ, ಸವಣೂರು ಜಿನ ಬಸದಿಯ ಆರ್ಚಕ ಶ್ರೇಯಾಂಸ್ ಕುಮಾರ್ ಇಂದ್ರ, ಚಂದಪ್ಪ ಪೂಜಾರಿ ಊರುಸಾಗು, ಸಂಜೀವ ಪೂಚಾರಿ ಆಗರಿ, ಬೆಳಿಯಪ್ಪ ಗೌಡ ಚೌಕಿದುಕ, ಸಂಘದ ಮಾಜಿ ಉಪಾಧ್ಯಕ್ಷ ವಾಸುದೇವ ಇಡ್ಯಾಡಿ, ಮಾಜಿ ಉಪ ಕಾರ್ಯನಿರ್ವಾಹಣಾಧಿಕಾರಿ ಕುಸುಮ ಪಿ.ಶೆಟ್ಟಿ ಕೆರೆಕೊಳ್ಳು, ಬೆಳಂದೂರು ಶಾಖೆಯ ಮಾಜಿ ವ್ಯವಸ್ಥಾಪಕ ಬೇಬಿ ಜೆ. ರೈ, ನಿವೃತ್ತ ಸಿಬ್ಬಂದಿ ಈಶ್ವರ ಗೌಡ ಕಾಯರ್ಗ ಸಹಿತ ಸಾವಿರಾರು ಮಂದಿ ಸದಸ್ಯರು ಉಪಸ್ಥಿತರಿದ್ದರು.

ಸನ್ಮಾನ:

ರಾಜ್ಯ ಜಾನಪದ ಪ್ರಚಂಡ ಪ್ರಶಸ್ತಿ ಪುರಸ್ಕೃತ, ಭೂತರಾಧನೆಯನ್ನು ಮಾಡಿಕೊಂಡುಬರುತ್ತಿರುವ ಡೊಂಬಯ್ಯ ಕಾಪೆಜಾಲು, ಸವಣೂರು ಪ್ರಾಥಮಿಕ ಕೃಷಿ ಹತ್ತಿನ ಸಹಯೋಗದಲ್ಲಿ ಕಾವ್ಯನಿರ್ವಹಿಸುತ್ತಿರುವ ಮಾಸ್ ಸಂಸ್ಥೆಗೆ ಅತೀ ಹೆಚ್ಚು ಅಡಿಕೆಯನ್ನು ಮಾರಾಟ ಮಾಡಿದ ಜಯರಾಮ ರೈ ಪರನೀರು, ಪಿ.ಡಿ.ಕೃಷ್ಣಕುಮಾರ್ ರೈ ದೇವಸ್ಯ ಹಾಗೂ ತಿಮ್ಮಪ್ಪ ಗೌಡ ಮುಂಡಾಳ ಮತ್ತು ಅಂತರ್ ರಾಷ್ಟ್ರೀಯ ಯೋಗಪಟು ಪ್ರಣಮ್ಯರವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ

ಸಂಘದ ವತಿಯಿಂದ 48 ಮುಂದಿ ಪ್ರತಿಭಾವಂತ ಎಸ್.ಎಸ್.ಎಲ್.ಸಿ, ಪಿಯುಸಿ ಹಾಗೂ ಪದವಿಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡಲಾಯಿತು. ವಿದ್ಯಾರ್ಥಿಗಳಿಗೆ ನಗದು ನೀಡಿ ಗೌರವಿಸಲಾಯಿತು.

error: Content is protected !!
Scroll to Top