ಕೊಲೆ ಆರೋಪಿಯನ್ನು ಮಾನವ ಹಕ್ಕುಗಳ ಅಧಿಕಾರಿ ಎಂದು ಪರಿಚಯಿಸಿದ ಮಟ್ಟಣ್ಣವರ್‌

ವಿಡಿಯೋ ಭಾರಿ ವೈರಲ್‌

ಧರ್ಮಸ್ಥಳ : ಧರ್ಮಸ್ಥಳ ವಿರುದ್ಧ ನಡೆಸುತ್ತಿರುವ ಹೋರಾಟದ ಮುಂಚೂಣಿಯಲ್ಲಿರುವ ಗಿರೀಶ್‌ ಮಟ್ಟಣ್ಣನವರ್‌ ಕೊಲೆ ಆರೋಪಿಯನ್ನು ತನ್ನ ಜೊತೆ ಇಟ್ಟುಕೊಂಡು ಆತನನ್ನು ಮಾನವ ಹಕ್ಕುಗಳ ಆಯೋಗದ ಅಧಿಕಾರಿ ಎಂದು ಪರಿಚಯಿಸಿದ ವಿಡಿಯೋ ಒಂದು ನಿನ್ನೆಯಿಂದ ವೈರಲ್‌ ಆಗಿದ್ದು, ಅವರು ನಡೆಸುತ್ತಿರುವ ಹೋರಾಟದ ಸಾಚಾತನವನ್ನು ಬಯಲುಗೊಳಿಸಿದೆ. ಮಾಧ್ಯಮಗಳ ಜೊತೆಗೆ ಮಾತನಾಡುವಾಗ ರೌಡಿಶೀಟರ್‌ ಒಬ್ಬನನ್ನು ಮಾನವ ಹಕ್ಕುಗಳ ಅಧಿಕಾರಿ ಎಂದು ಗಿರೀಶ್ ಮಟ್ಟಣ್ಣನವರ್ ಪರಿಚಯಿಸಿದ್ದಾರೆ.

ಮಾಧ್ಯಮಗಳಿಗೆ ಹೇಳಿಕೆ ನೀಡುವ ವೇಳೆ ತಮ್ಮ ಪಕ್ಕದಲ್ಲಿ ನಿಂತಿದ್ದ ಮದನ ಬುಗಡಿ ಎಂಬ ವ್ಯಕ್ತಿಯನ್ನು ಮಾನವ ಹಕ್ಕುಗಳ ಆಯೋಗದ ಅಧಿಕಾರಿ ಎಂದು ಮಟ್ಟಣ್ಣನವರ್ ಪರಿಚಯಿಸಿದ್ದಾರೆ. ಆದರೆ ಆ ವ್ಯಕ್ತಿ ಹುಬ್ಬಳ್ಳಿಯಲ್ಲಿ ಕುಖ್ಯಾತ ರೌಡಿಶೀಟರ್. ಈತ ಹುಬ್ಬಳ್ಳಿ ವಿವಿಧ ಠಾಣೆಗಳಲ್ಲಿ ರೌಡಿಶೀಟರ್ ಆಗಿದ್ದಾನೆ. ಹಳೇ ಹುಬ್ಬಳ್ಳಿ ಶಿವಶಂಕರ್ ಕಾಲೊನಿಯ ತಾಂಡಾ ನಿವಾಸಿ ಈ ಮದನ ಬುಗಡಿ. ಕೊಲೆ, ಕೊಲೆಯತ್ನ, ಸುಲಿಗೆ, ದೊಂಬಿ, ದನಗಳ್ಳತನ ಸೇರಿ ವಿವಿಧ ಪ್ರಕರಣಗಳು ಈತನ ಮೇಲಿವೆ. ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ ಎಂಬ ವಿಚಾರ ಬಯಲಾಗಿದೆ.





















































 
 

ನೀಲಿ ಕೋಟ್‌ ಹಾಕಿಕೊಂಡು ಗತ್ತಿನಿಂದ ನಿಂತಿದ್ದ ವ್ಯಕ್ತಿಯನ್ನು ಗಿರೀಶ್‌ ಮಟ್ಟಣ್ಣವರ್‌ ಮಾನವ ಹಕ್ಕುಗಳ ಅಧಿಕಾರಿ ಎಂದು ಮಾಧ್ಯಮಗಳಿಗೆ ಪರಿಚಯಿಸಿದ್ದಾರೆ. ಆಗ ಅಲ್ಲೇ ಇದ್ದ ಪೊಲೀಸ್‌ ಅಧಿಕಾರಿಯೊಬ್ಬರು ಆ ವ್ಯಕ್ತಿಯನ್ನು ಮುಂದಕ್ಕೆ ಕರೆದು ಆತ ಜೇಬಿಗೆ ಸಿಕ್ಕಿಸಿಕೊಂಡಿದ್ದ ಅಂಬೇಡ್ಕರ್‌ ಚಿತ್ರವಿರುವ ಪೆನ್ನನ್ನು ತೆಗೆದು ಇವರು ಮಹಾನ್‌ ವ್ಯಕ್ತಿ, ಇಂಥವರ ಫೋಟೊ ನಿಮ್ಮಲ್ಲಿರಬಾರದು ಎಂದು ಹೇಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದು ಹುಬ್ಬಳ್ಳಿಯಲ್ಲಿ ನಡೆದಿರುವ ಘಟನೆ ಎನ್ನಲಾಗಿದೆ.

error: Content is protected !!
Scroll to Top