ವಿದ್ಯಾ ಸಮೃದ್ಧಿ ಲೋಕಾರ್ಪಣೆ

ಪುತ್ತೂರು: ಶಿಕ್ಷಣ ಕ್ಷೇತ್ರದಲ್ಲಿ ಒಂದು ಕ್ರಾಂತಿ ಮಾಡಲು ಸಜ್ಜಾಗಿರುವ ಆಪ್ (APP) ವಿದ್ಯಾ ಸಮೃದ್ಧಿಯಲ್ಲಿ ಪ್ರಸಾರವಾಗಲಿರುವ 10ನೆ ತರಗತಿಯ ಪಾಠಗಳ ವಿಡಿಯೋ ಚಿತ್ರೀಕರಣಕ್ಕೆ ಇಂದು ನ್ಯೂಸ್ ಪುತ್ತೂರು ಕಚೇರಿಯಲ್ಲಿ ಚಾಲನೆ ನೀಡಲಾಯಿತು.

ಜಂಟಿಯಾಗಿ ದೀಪ ಬೆಳಗಿ ಉದ್ಘಾಟನೆಗೈದ shree ಪುಟ್ಟಣ್ಣ ಮತ್ತು ಶ್ರೀ ಶ್ರೀನಿವಾಸ್ ಅವರು ಶುಭ ಹಾರೈಸಿದರು. ಪ್ರೊ. ಪದ್ಮನಾಭ ಅವರು ಆಪ್’ನ ಆಶಯವನ್ನು ವಿಶದಪಡಿಸಿದರು.

ಅಕ್ಟೋಬರ್ 20ಕ್ಕೆ ಆಪ್ ಲಭ್ಯ
ವಿದ್ಯಾ ಸಮೃದ್ಧಿ ಆಪ್’ನ ನಿರ್ಮಾಣ ಈಗಾಗಲೇ ಆರಂಭವಾಗಿದ್ದು ಅಕ್ಟೋಬರ್ 20ಕ್ಕೆ ಅದು ವಿದ್ಯಾರ್ಥಿಗಳ ಉಪಯೋಗಕ್ಕೆ ಮತ್ತು ಆಸಕ್ತರಿಗೆ ಲಭ್ಯವಾಗಲಿದೆ.





















































 
 

ಸಂಪನ್ಮೂಲ ವ್ಯಕ್ತಿ ಸೀತಾರಾಮ ಕೇವಳ ನಿರೂಪಿಸಿದ ಕಾರ್ಯಕ್ರಮದಲ್ಲಿ ಆಪ್’ನ ಕನಸುಗಾರ ಹರಿಪ್ರಸಾದ್ ಸ್ವಾಗತಿಸಿ ಶ್ರೀಮತಿ ನಾಗವೇಣಿ ಹರಿಪ್ರಸಾದ್ ವಂದನಾರ್ಪಣೆಗೈದರು. ಕಾರ್ಯಕ್ರಮದ ಬಳಿಕ ನ್ಯೂಸ್ ಪುತ್ತೂರು ಸ್ಟುಡಿಯೋದಲ್ಲಿ ಸೀತಾರಾಮ ಕೇವಳ ಅವರು ಪ್ರಸ್ತುತ ಪಡಿಸಿದ ದ್ವಿತೀಯ ಭಾಷೆ ಇಂಗ್ಲೀಷ್’ನ ಮೊದಲ ಪಾಠ A Heroದ ಚಿತ್ರೀಕರಣ ನಡೆಯಿತು. ನ್ಯೂಸ್ ಪುತ್ತೂರುನ ಸಿಬ್ಬಂದಿ ವರ್ಗದವರಾದ ದೀಪಿಕಾ ಮತ್ತು ಶ್ರಾವ್ಯ ಚಿತ್ರೀಕರಣ ನಡೆಸಿದರು. ಮುಂದೆ ಸಂಪನ್ಮೂಲ ವ್ಯಕ್ತಿಗಳಾಗಿ ಮುರಳೀಧರ ಕೆ.ಎಲ್., ನವೀನಾ ದಾಮೋದರ ಮತ್ತು ಹರಿಪ್ರಸಾದ್ ಸಹಕರಿಸಲಿದ್ದು ಒಟ್ಟು 5 ಸಾವಿರ ವೀಡಿಯೋಗಳ ಚಿತ್ರೀಕರಣ ನಡೆಯಲಿದೆ.

ಶ್ರೀಮತಿ ಉಮಾವತಿ, ಶ್ರೀಮತಿ ಗುಲಾಬಿ, ರಮೇಶ್, ಸುಬ್ರಹ್ಮಣ್ಯ, ನೇತ್ರಾವತಿ ಸುಬ್ರಹ್ಮಣ್ಯ, ಕೃಷ್ಣಪ್ಪ ಬಂಬಿಲ, ಹರ್ಷಲ್, ಸಾರ್ಥಕ್ ಮತ್ತು ಸಮೃದ್ಧಿ ಉಪಸ್ಥಿತರಿದ್ದರು.

error: Content is protected !!
Scroll to Top