ಪುತ್ತೂರು: ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ನಿಂತಿಕಲ್ಲು, ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ (ರಿ.) ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮ ಸಾಧನಾ’ ಸಹಕಾರ ಸೌಧ ನಿಂತಿಕಲ್ಲಿನ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಟ್ರಸ್ಟ್ ಅಧ್ಯಕ್ಷ ರಾಜೇಂದ್ರ ಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ ಹಲವಾರು ಜನಪರ ಕಾರ್ಯಕ್ರಮಗಳನ್ನು ನಡೆಸುತಿರುವುದು ಅಭಿನಂದನೀಯ. ಸಹಕಾರ ಸಂಘದ ಮಹಾಸಭೆಯೊಂದಿಗೆ ಸದಸ್ಯರಿಗೆ ಉಚಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಇದು ಟ್ರಸ್ಟ್ ಮತ್ತು ಸಹಕಾರ ಸಹಕಾರ ಸಂಘಕ್ಕೆ ಜನರ ಆರೋಗ್ಯದ ಬಗೆಗಿರುವ ಕಾಳಜಿಯನ್ನು ತೋರಿಸುತ್ತದೆ ಎಂದು ಹೇಳಿದರು.
ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಇದರ ಅಧ್ಯಕ್ಷ ಕೆ. ರಾಜೇಂದ್ರ ಪ್ರಸಾದ್ ಶೆಟ್ಟಿ ಎಣ್ಮೂರು ಗುತ್ತು ಮಾತನಾಡಿ ಜನರು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತೀ ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ ನಿಂತಿಕಲ್ಲು. ಇದರ ಅಧ್ಯಕ್ಷ ವಸಂತ ನಡುಬೈಲು ವಹಿಸಿಕೊಂಡಿದ್ದರು.
ಶಿಬಿರದಲ್ಲಿ ಸಾಮಾನ್ಯ ತಪಾಸಣೆ, ರಕ್ತದೊತ್ತಡ (B.P.) ಮತ್ತು ಮಧುಮೇಹ (Sugar) ಪರೀಕ್ಷೆ, ಎಲುಬು ಮತ್ತು ಕೀಲು ತಪಾಸಣೆ, ಕಿವಿ ಮೂಗು ಗಂಟಲು ತಪಾಸಣೆ, ಥೈರಾಡ್ ಪರೀಕ್ಷೆ ನಡೆಯಿತು.
ಸ್ಪೂಡೆಂಟ್ಸ್ ಅಫೇರ್ ಕ್ಷೇಮ ಇದರ ನಿರ್ದೇಶಕ ಪ್ರೊ| ಮಹಾಬಲೇಶ್ ಶೆಟ್ಟಿ,ಉಪಸ್ಥಿತರಿದ್ದರು. ಸಹಕಾರ ಸಂಘದ ಸಿಇಒ ಚಿದಾನಂದ ರೈ ಸ್ವಾಗತಿಸಿದರು, ವಸಂತ ವೀರಮಂಗಲ ಕಾರ್ಯಕ್ರಮ ನಿರೂಪಿಸಿದರು. ಅನೂಪ್ ಬಿಳಿಮಲೆ ವಂದಿಸಿದರು.
























