ಶಿವ ರುದ್ರತಾಂಡವದ ಫೋಟೊ ಅಪ್‌ಲೋಡ್‌ ಮಾಡಿದ ಧರ್ಮಸ್ಥಳ ದೇಗುಲ

ಅಪಪ್ರಚಾರ ಮಾಡಿದವರಿಗೆ ಧರ್ಮವೇ ಗೆಲ್ಲುತ್ತದೆ ಎಂಬ ಸಂದೇಶ

ಮಂಗಳೂರು: ನೂರಾರು ಶವ ಹೂತಿಟ್ಟಿದ್ದೇನೆ ಎಂದು ಹೇಳಿಕೊಂಡು ತಲೆಬುರುಡೆ ಸಮೇತ ಪೊಲೀಸರ ಬಳಿ ಬಂದಿದ್ದ ಮುಸುಕುಧಾರಿ ಚಿನ್ನಯ್ಯ ಎಂಬಾತನ ಬಂಧನವಾಗಿ ಬುರುಡೆ ಹಿಂದಿನ ಮುಸುಕು ಒಂದೊಂದಾಗಿ ಸರಿಯಲು ತೊಡಗಿದಂತೆ ಧರ್ಮಸ್ಥಳ ದೇವಸ್ಥಾನದ ಅಧಿಕೃತ ಸಾಮಾಜಿಕ ಜಾಲತಾಣ ಪುಟದಲ್ಲಿ ಶಿವ ರುದ್ರತಾಂಡವ ಮಾಡುತ್ತಿರುವ ಫೋಟೊ ಒಂದನ್ನು ಅಪ್ಲೋಡ್‌ ಮಾಡಿ ಕೊನೆಯ ಗೆಲುವು ಎಂದಿದ್ದರೂ ಧರ್ಮಕ್ಕೆ ಎನ್ನುವುದನ್ನು ಸೂಚಿಸಲಾಗಿದೆ.

ಧರ್ಮ ವಿಜಯದ ಸಂಕೇತವಾಗಿ ಧರ್ಮಸ್ಥಳ ದೇವಸ್ಥಾನದ ಹಿಂದೆ ಶಿವ ರುದ್ರತಾಂಡವದ ಫೋಟೊ ಹಾಕಲಾಗಿದೆ. ಧರ್ಮಸ್ಥಳದ ದೇವರ ಪಾವಿತ್ರ್ಯಕ್ಕೆ ಧಕ್ಕೆ ತರುವ ಷಡ್ಯಂತ್ರ ಮಾಡಿ ಗ್ಯಾಂಗ್‌ ಸುಳ್ಳಿನ ಕೋಟೆ ಕಟ್ಟಿತ್ತು. ಒಂದೊಂದೇ ಸುಳ್ಳಿನ ಕೋಟೆ ಕಳಚಿ ಬಿದ್ದು ಷಡ್ಯಂತ್ರ ಮಾಡುತ್ತಿರುವವರು ಬಂಧನವಾಗುತ್ತಿದ್ದಂತೆ ಆಡಳಿತ ಮಂಡಳಿ ಶಿವ ರುದ್ರತಾಂಡವದ ಫೋಟೊ ಹಾಕಿ ನಮೋ ಮಂಜುನಾಥ ಎಂದು ಬರೆದು ಅಪಪ್ರಚಾರ ಮಾಡಿದವರಿಗೆ ಸಂದೇಶ ಕಳುಹಿಸಿದೆ.





















































 
 

ಶಿವ ರುದ್ರತಾಂಡವ ಅಧರ್ಮದ ವಿನಾಶವನ್ನು, ಅಹಂಕಾರದ ನಾಶವನ್ನು ಸೂಚಿಸುತ್ತದೆ. ಢಮರುಗ ಹಿಡಿದ ರುದ್ರನಾಗಿ ತೋರುವ ಶಿವನ ಉಗ್ರ ಮತ್ತು ವಿನಾಶಕಾರಿ ಸ್ವರೂಪವನ್ನು ಬಿಂಬಿಸುತ್ತದೆ.

error: Content is protected !!
Scroll to Top