ಒಂದೊಂದೇ ಸತ್ಯಗಳು ಹೊರ ಬರುತ್ತಿವೆ: ಡಾ. ಡಿ. ವೀರೇಂದ್ರ ಹೆಗ್ಗಡೆ

ದೇಗುಲದ ಸೋಷಿಯಲ್ ಮೀಡಿಯಾದಲ್ಲಿ ‌ಶಿವ ರುದ್ರತಾಂಡವ ಚಿತ್ರ ಅಪ್ಲೋಡ್

ಧರ್ಮಸ್ಥಳ: ನೂರಾರು ಶವಗಳನ್ನು ಹೂಳಲಾಗಿದೆ ಎನ್ನುವ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ SIT ದೂರುದಾರ ಮುಸುಕುಧಾರಿ ‌ಚೆನ್ನಯ್ಯನನ್ನೇ ಬಂಧಿಸಿದ್ದು, ಆತನಿಗೆ 10 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಈ ಪ್ರಕರಣದ ಬಗ್ಗೆ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಮಾತನಾಡಿದ್ದು, ಈ ಪ್ರಕರಣ SIT ತನಿಖೆಯಲ್ಲಿದ್ದು, ಹೆಚ್ಚೇನು ‌ಮಾತನಾಡುವುದಿಲ್ಲ. ಒಂದೊಂದೇ ಸತ್ಯಗಳು ಹೊರ ಬರುತ್ತಿದ್ದು, ಇದು ಸಂತಸ ನೀಡಿದೆ ಎಂದಿದ್ದಾರೆ.





















































 
 

ಎಲ್ಲಾ ಆರೋಪಗಳು ಈಗ ತೊಳೆದಂತಾಗಿದೆ‌‌. ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಹೀಗೆಯೇ ಇರಲಿ. ಈ ಕ್ಷೇತ್ರದ ಮೇಲೆ ದೇವರ ಆಶೀರ್ವಾದ ಇದೆ‌. ಭಗವಂತ ನಮ್ಮ ಜೊತೆ ಇದ್ದಾನೆ ಎಂದು ಹೇಳಿದ್ದಾರೆ.

ಧರ್ಮಸ್ಥಳ ದೇಗುಲದ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ‌ಶಿವ ರುದ್ರತಾಂಡವ ಚಿತ್ರ ಅಪ್ಲೋಡ್ ಮಾಡಲಾಗಿದೆ.

error: Content is protected !!
Scroll to Top