ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ದೂರುದಾರ ಮುಸುಕುಧಾರಿ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಈ ಸಂಬಂಧ ತನಿಖೆ ಪ್ರಗತಿಯಲ್ಲಿರುವ ಕಾರಣ ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಉಡುಪಿಯಲ್ಲಿ ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, SIT ತನಿಖೆ ಆಂತ್ಯವಾಗುತ್ತದೆ ಎಂದು ಹೇಳಲಾಗದು. ಈ ಪ್ರಕರಣದ ಹಿಂದಿನ ಜಾಲವನ್ನು ಪತ್ತೆ ಮಾಡಲಾಗುವುದು. SIT ತನಿಖೆಯ ಅಂತಿಮ ವರದಿ ಬರುವವರೆಗೆ ಏನನ್ನೂ ಹೇಳಲಾಗದು ಎಂದು ತಿಳಿಸಿದ್ದಾರೆ.
ಸುಜಾತ ಭಟ್ ಪ್ರಕರಣ ಸಹ ತನಿಖೆಯಲ್ಲಿದೆ. ಆದರೆ ಇದಕ್ಕೆ ಸಂಬಂಧಿಸಿದ ವರದಿಗಳು ಬರುವ ವರೆಗೆ ಯಾವುದೇ ಮಾಹಿತಿ ಬಹಿರಂಗ ಮಾಡುವುದು ಅಸಾಧ್ಯ. ಯಾವುದೇ ವಿಷಯ ಬಹಿರಂಗವಾದರೆ ಅದರಿಂದ SIT ತನಿಖೆಗೆ ಅಡ್ಡಿ ಮಾಡಿದ ಹಾಗಾಗುತ್ತದೆ. ಹೇಳಿಕೆಗಳ ಆಧಾರದಲ್ಲಿ ತನಿಖೆ ಮಾಡುವುದು ಸಾಧ್ಯವಿಲ್ಲ ಎಂದಿದ್ದಾರೆ.
























