ತಿಮರೋಡಿ 2 ಗಂಟೆಗಳ ಕಾಲ ಪೊಲೀಸ್ ವಶಕ್ಕೆ: ನ್ಯಾಯಾಲಯದ ಆದೇಶ

ಉಡುಪಿ: ಬಿಜೆಪಿ ನಾಯಕ ಬಿ. ಎಲ್. ಸಂತೋಷ್ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಆರೋಪಿ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು 2 ಗಂಟೆಗಳ ಕಾಲ ಪೊಲೀಸ್ ವಶಕ್ಕೆ ನೀಡಿ ಉಡುಪಿಯ ಹೆಚ್ಚುವರಿ ಸಿವಿಲ್ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ ಆದೇಶ ನೀಡಿದೆ.

ತಿಮರೋಡಿಯನ್ನು ಪ್ರಕರಣದ ತನಿಖೆಗಾಗಿ ತಮ್ಮ ವಶಕ್ಕೆ ನೀಡುವಂತೆ ಬ್ರಹ್ಮಾವರದ ಪೊಲೀಸರು ಕೋರ್ಟ್‌ಗೆ ಮನವಿ ಮಾಡಿದ್ದರು. ಅದರಂತೆ ತಿಮರೋಡಿಯನ್ನು ‌ಒಂದು ಗಂಟೆಯ ಒಳಗಾಗಿ ನ್ಯಾಯಾಲಕ್ಕೆ ಹಾಜರುಪಡಿಸಬೇಕು ಎಂದು ನ್ಯಾಯಾಧೀಶರು ಸೂಚಿಸಿದರು.

ಅದರಂತೆ 1.30 ರ ಒಳಗೆ ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ನ್ಯಾಯಾಲಯಕ್ಕೆ ಕರೆತರಲಾಯಿತು. ವಾದ ಪ್ರತಿವಾದದ ಬಳಿಕ ಆರೋಪಿಯನ್ನು ಎರಡು ಗಂಟೆಗಳ ಅವಧಿಗೆ ಪೊಲೀಸರಿ ಕಸ್ಟಡಿಗೆ ಒಪ್ಪಿಸಲಾಯಿತು. ಮಧ್ಯಾಹ್ನ 3.45 ಮತ್ತೆ ಕೋರ್ಟ್ ಗೆ ಹಾಜರು ಮಾಡುವಂತೆ ಆದೇಶ ನೀಡಿದೆ.





















































 
 
error: Content is protected !!
Scroll to Top