ಮಗಳೇ ಇಲ್ಲ ಎಂದು ಹೇಳಿ ಕೆಲವೇ ತಾಸುಗಳಲ್ಲಿ ಉಲ್ಟಾ ಹೊಡೆದ ಸುಜಾತ ಭಟ್‌

ಕ್ಷಣಕ್ಕೊಂದು ಹೇಳಿಕೆ ನೀಡಿ ಪ್ರಕರಣವನ್ನು ಗೊಂದಲಮಯಗೊಳಿಸಿದ ವೃದ್ಧೆ

ಮಂಗಳೂರು: ನನಗೆ ಅನನ್ಯಾ ಭಟ್‌ ಎಂಬ ಮಗಳೇ ಇಲ್ಲ. ನನಗೆ ಸುಳ್ಳು ದೂರು ನೀಡಲು ಹೇಳಿದ್ದರು. ಅವರು ಹೇಳಿದಂತೆ ದೂರು ನೀಡಿದ್ದೇನೆ ಎಂದು ನಿನ್ನೆ ಹೇಳಿದ್ದ ಸುಜಾತ ಭಟ್‌ ಕೆಲವೇ ತಾಸುಗಳಲ್ಲಿ ಉಲ್ಟಾ ಹೊಡೆದು ನನಗೆ ಅನನ್ಯಾ ಭಟ್ ಅಂತ ಮಗಳಿರೋದು ಸತ್ಯ ಎಂದು ಹೇಳಿ ಇಡೀ ಪ್ರಕರಣವನ್ನು ಗೊಂದಲಮಯಗೊಳಿಸಿದ್ದಾರೆ.

ಶುಕ್ರವಾರ ಖಾಸಗಿ ವಾಹಿನಿಯೊಂದರ ಜೊತೆ ಕಾರಿನಲ್ಲಿ ಕುಳಿತು ಮಾತನಾಡಿದ್ದ ನಾನು ಹೇಳಿದ್ದೆಲ್ಲ ಕಟ್ಟುಕಥೆ. ಗಿರೀಶ್‌ ಮಟ್ಟಣ್ಣ, ಜಯಂಟ್‌ ಟಿ. ಮತ್ತಿತರರು ಸೇರಿ ನನ್ನಿಂದ ಸುಳ್ಳು ಹೇಳಿಸಿದ್ದಾರೆ. ನನ್ನ ಹಿರಿಯರ ಆಸ್ತಿಯನ್ನು ಧರ್ಮಸ್ಥಳಕ್ಕೆ ಕೊಡಲಾಗಿದೆ. ಹೀಗೆ ಕೊಡುವಾಗ ಆಸ್ತಿಯ ಹಕ್ಕುದಾರಳಾಗಿರುವ ನನ್ನ ಸಹಿ ಪಡೆದುಕೊಂಡಿಲ್ಲ. ಯಾಕೆ ನನ್ನನ್ನು ಬಿಟ್ಟು ಆಸ್ತಿ ಕೊಟ್ಟಿದ್ದೀರಿ ಎಂಬ ನ್ಯಾಯ ಕೇಳಲು ನಾನು ಬಂದಿದ್ದೇನೆ ಎಂದೆಲ್ಲ ವಿವರಿಸಿ ನಾನು ಈ ರೀತಿ ಮಾಡಬಾರದಿತ್ತು ಎಂದು ಹೇಳಿ ಕೊನೆಗೆ ಕ್ಷಮೆ ಕೂಡ ಕೇಳಿದ್ದರು. ಈ ವಿಡಿಯೋ ವೈರಲ್‌ ಆದ ಕೆಲವೇ ತಾಸುಗಳಲ್ಲಿ ಮತ್ತೊಂದು ಸಂದರ್ಶನದಲ್ಲಿ ಸುಜಾತ ಭಟ್‌ ಪೂರ್ತಿ ಉಲ್ಟಾ ಹೇಳಿಕೆ ನೀಡಿದ್ದಾರೆ.





















































 
 

ಕೆಲವು ತಾಸುಗಳ ಬಳಿಕ ಇನ್ನೊಂದು ವಾಹಿನಿ ಜೊತೆ ಮಾತನಾಡಿರುವ ಅವರು, ನಾನು ಕೊಟ್ಟ ದೂರಿಗೆ ಬದ್ಧಳಾಗಿದ್ದೇನೆ. ಅನನ್ಯಾ ಭಟ್ ನನ್ನ ಮಗಳು, ಅವಳು ಸತ್ತು ಹೋಗಿದ್ದಾಳೆ. ಚಾನೆಲ್‌ನವರೊಬ್ಬರು ನನಗೆ ಒತ್ತಾಯ ಮಾಡಿ ನನ್ನಿಂದ ಆ ಹೇಳಿಕೆ ಪಡೆದುಕೊಂಡಿದ್ದಾರೆ. ನಾನು ಕೆಲವೊಮ್ಮೆ ಟೆನ್ಶನ್‌ನಲ್ಲಿರುತ್ತೇನೆ. ಅದನ್ನೆಲ್ಲ ಇಲ್ಲಿಗೆ ಬಿಟ್ಟುಬಿಡಿ, ನನಗೆ ಮಗಳಿರೋದು ಸತ್ಯ ಎಂದು ಹೇಳಿದ್ದಾರೆ.

ಚಾನೆಲ್‌ನವರು ನಿಮಗೆ ನಾವು ಸಹಾಯ ಮಾಡುತ್ತೇವೆ. ನಾವು ಹೇಳಿಕೊಟ್ಟ ಹಾಗೆ ಹೇಳಿ. ನಾವು ರೆಕಾರ್ಡ್ ಮಾಡಿಕೊಳ್ಳುತ್ತೇವೆ ಎಂದು ಹೇಳಿ ಒತ್ತಾಯಪೂರ್ವಕವಾಗಿ ಹೇಳಿಕೆ ಪಡೆದುಕೊಂಡಿದ್ದಾರೆ. ನನಗೆ ಮಗಳಿದ್ದಾಳೆ. ನನಗೆ ನ್ಯಾಯ ಬೇಕು ಎಂದು ತಿಳಿಸಿದ್ದಾರೆ.

ನಾನು ದುಡ್ಡಿಗೊಸ್ಕರ ಡಿಮ್ಯಾಂಡ್ ಮಾಡಿಲ್ಲ. ನಾನು ಯಾರು ಕೂಡ ದುಡ್ಡು ಕೊಡ್ತೀನಿ ಅಂತ ಹೇಳಲಿಲ್ಲ. ನಮ್ಮ ಆಸ್ತಿ ಜೈನರಿಗೆ ಕೊಟ್ಟಿದ್ದರು. ಆದರೆ ನನ್ನ ಸಹಿ ಇಲ್ಲದೆ ಆಸ್ತಿಯನ್ನು ಹೇಗೆ ಕೊಟ್ಟಿದ್ದೀರಿ ಎಂದು ಕೇಳಿದೆ. ನನ್ನ ತಾತನ ಆಸ್ತಿ ಅದು ಮೊಮ್ಮಕ್ಕಳಿಗೆ ಸಿಗಬೇಕಿತ್ತು ಅಷ್ಟೇ ಅದಕ್ಕೆ ಹೀಗೆ ಮಾಡಿದ್ದೇನೆ ಎಂದಿದ್ದರು.

ಅಜ್ಜಿಯನ್ನು ಕೈ ಬಿಟ್ಟ ಹೋರಾಟಗಾರರು

ಸುಜಾತ ಭಟ್‌ ತನ್ನ ಹೆಸರು ಉಲ್ಲೇಖಸಿರುವುದಕ್ಕೆ ಪ್ರತಿಕ್ರಿಯಿಸಿರುವ ಗಿರೀಶ್‌ ಮಟ್ಟಣ್ಣ, ಅನನ್ಯಾ ಭಟ್‌ ಫೋಟೊ ಕೇಳಿದಾಗ ಸುಜಾತ ಭಟ್ ಮೋಡೆಲ್‌ ಒಬ್ಬರ ಫೋಟೊ ಕಳಿಸಿದ್ದರು ಈ ಹಿಂದೆ ದೆಹಲಿಯಲ್ಲಿ ಸುಜಾತ ಭಟ್‌ ಅವರನ್ನು ಭೇಟಿಯಾಗಿದ್ದೆ. ಆಗ ತಮ್ಮ ಮಗಳ ಮೇಲೆ ಅತ್ಯಾಚಾರ ನಡೆದಿದೆ. ನನಗೆ ನ್ಯಾಯ ಕೊಡಿಸಿ ಎಂದು ಸುಜಾತ ಭಟ್‌ ಹೇಳಿದ್ದರು. ಆದರೆ ಮಗಳ ಫೋಟೊ ಕೇಳಿದಾಗ ಮೋಡೆಲ್‌ ಫೋಟೋ ಕಳಿಸಿದ್ದರು. ಇದನ್ನು ಫ್ಯಾಕ್ಟ್‌ ಚೆಕ್‌ ಮಾಡಿದಾಗ ಸುಳ್ಳು ಎಂದು ಗೊತ್ತಾಯಿತು. ಅಲ್ಲಿಂದ ನಾನು ಈ ಪ್ರಕರಣದಿಂದ ಅಂತರ ಕಾದುಕೊಂಡೆ ಎಂದು ಹೇಳಿದ್ದಾರೆ.

ಸುಜಾತ್ ಭಟ್ ಪದೇಪದೆ ಕರೆ ಮಾಡಿ ನ್ಯಾಯ ಕೊಡಿಸಿ ಎಂದು ಹೇಳುತ್ತಿದ್ದರು. ಆಗ ನಾನು ಜಯಂತ್‌ಗೂ ಕೂಡ ಹೇಳಿದ್ದೆ. ಈ ಬಗ್ಗೆ ತನಿಖೆ ನಡೆಯಲಿ, ಸತ್ಯ ಹೊರಗಡೆ ಬರಲಿ ಎಂದಿದ್ದಾರೆ.

error: Content is protected !!
Scroll to Top