ಬೆಂಗಳೂರು: ಈ ಹಿಂದೆ ಸದನದಲ್ಲಿ RSS ಗೀತೆ ಹಾಡಿ ಅಚ್ಚರಿಗೆ ಕಾರಣವಾಗಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಈಗ RSS ಗುಣಗಾನ ಮಾಡಿ ಮತ್ತೆ ಚರ್ಚೆಗೆ ಗ್ರಾಸರಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಕೆಲವೊಮ್ಮೆ ಕೆಲವೊಂದು ಸಂಸ್ಥೆಗಳಲ್ಲಿ ಒಳ್ಳೆಯ ಗುಣಗಳಿರುತ್ತವೆ. ಅವುಗಳನ್ನು ನಾವು ಗಮನಿಸಬೇಕು ಅಲ್ಲವೇ. ನೇರವಾಗಿ ಮತ್ತು ದಿಟ್ಟವಾಗಿ ಮಾತನಾಡುವುದು ನಮ್ಮ ಗುಣ. ಬೇರೆಯವರಲ್ಲಿನ ಒಳ್ಳೆಯ ಗುಣವನ್ನು ನಾವು ಗಮನಿಸಿದ್ದೇವೆ. ಅದನ್ನೇ RSS ವಿಷಯದಲ್ಲೂ ತಾವು ಮಾಡಿದ್ದಾಗಿ ಹೇಳಿದ್ದಾರೆ.
ನಾನು ನನ್ನದೇ ರೀತಿಯಲ್ಲಿ ಪ್ರತಿಯೊಂದು ರಾಜಕೀಯ ಸಂಸ್ಥೆಗಳ ಬಗ್ಗೆ ಅಧ್ಯಯನ ನಡೆಸಿದ್ದೇನೆ. RSS ಸಂಘಟನೆ ಹೇಗೆ ಕಟ್ಟಿದ್ದು ಎನ್ನುವುದನ್ನು ನಾನು ಅರಿತಿದ್ದೇನೆ. ಅದು ಹಲವಾರು ಶಿಕ್ಷಣ ಸಂಸ್ಥೆಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ವಿದ್ಯಾರ್ಥಿಗಳನ್ನು ತಲುಪುವ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ರಾಜಕೀಯವಾಗಿ ಹಲವು ಭಿನ್ನಾಭಿಪ್ರಾಯಗಳಿದ್ದರೂ, ನಮ್ಮ ಶತ್ರುಗಳು ಯಾರು, ನಮ್ಮ ಮಿತ್ರರು ಯಾರು ಎನ್ನುವ ಬಗ್ಗೆ ಗಮನ ಹೊಂದಿರಬೇಕು. ಆದ್ದರಿಂದ RSS ಇತಿಹಾಸ ತಿಳಿದುಕೊಂಡಿದ್ದೇನೆ ಎಂದಿದ್ದಾರೆ.
ನಾನು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾಂಗ್ರೆಸಿಗ. ಯಾವ ಪಕ್ಷದ ಜೊತೆಗೂ ಕೈ ಜೋಡಿಸುವ ಮಾತೇ ಇಲ್ಲ.
























