RSS ಗೀತೆ ಹಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ಆರ್‌ಎಸ್‌ಎಸ್ ಗೀತೆ ‘ನಮಸ್ತೇ ಸದಾ ವತ್ಸಲೇ’ ಯನ್ನು ವಿಧಾನಸಭೆಯಲ್ಲಿ ಹಾಡುವ ಮೂಲಕ ಕಾಂಗ್ರೆಸ್ ನಾಯಕ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

ವಿಧಾನ‌ಸೌಧದಲ್ಲಿ ಕೆಲ ಸಮಯದ ಹಿಂದೆ ನಡೆದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಕಾಲ್ತುಳಿತ ಪ್ರಕರಣದ ಚರ್ಚೆ ವೇಳೆ ಈ ಘಟನೆ ನಡೆದಿದೆ.

RCB ಗೆಲುವಿನಲ್ಲಿ ಡಿ.ಕೆ. ಶಿವಕುಮಾರ್ ಪಾಲ್ಗೊಂಡ ಪ್ರಸ್ತಾಪ ಬಂದಾಗ ಉತ್ತರಿಸಿದ ಅವರು, ನಾನು ಕ್ರಿಕೆಟ್ ಅಭಿಮಾನಿ. ಕೆ.ಎಸ್.ಸಿ.ಎ. ಸದಸ್ಯ, ಕ್ರೀಡಾಂಗಣಕ್ಕೆ ಹೋಗಿ ಕಪ್‌ಗೂ ಮುತ್ತು ಕೊಟ್ಟು ಬಂದಿದ್ದೆ ಎಂದರು. ಹಾಗೆಯೇ ನೀವು ಈ ವೇಳೆ RSS ಚಡ್ಡಿ ಹಾಕಿದ್ದಿರಲ್ಲಾ ಎಂದು ವಿಪಕ್ಷ ‌ನಾಯಕ R. ಅಶೋಕ್ ಹೇಳಿದ್ದು, ಇದಕ್ಕೆ ಉತ್ತರವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೀತೆ ಹಾಡಿದ್ದಾರೆ. ಹಾಗೆಯೇ ಆ‌ ವಿಷಯದ ಬಗ್ಗೆ ಈಗ ಚರ್ಚೆ ಬೇಡ ಎಂದು ತಿಳಿಸಿದ್ದಾರೆ.





















































 
 
error: Content is protected !!
Scroll to Top