ಬೆಂಗಳೂರು: ಸರ್ಕಾರ ಆಯೋಜಿಸಿದ RCB ವಿಜಯೋತ್ಸವ ಕಾರ್ಯಕ್ರಮದಲ್ಲಿ 11 ಮಂದಿ ಮೃತಪಟ್ಚಿದ್ದಾರೆ. ಸರ್ಕಾರದಿಂದ ತಪ್ಪು ನಡೆದಿದ್ದು, ಕ್ಷಮಾಪಣೆ ಕೇಳುವಂತೆ ವಿಪಕ್ಷ ನಾಯಕ R. ಅಶೋಕ್ ಅವರು ಆಗ್ರಹಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದ ಹಾಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಉತ್ತರ ನೀಡಿದ್ದು, ಈ ಸಂದರ್ಭದಲ್ಲಿ ಅಶೋಕ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವುದಾಗಿದೆ.
ಈ ದುರಂತದಲ್ಲಿ ಸರ್ಕಾರದಿಂದ ತಪ್ಪಾಗಿದೆ. ಕ್ಷಮೆಯನ್ನೂ ನೀವು ಕೇಳಿಲ್ಲ. ವರದಿಯಲ್ಲಿ ಎಲ್ಲಾ ತಪ್ಪುಗಳನ್ನು ಪೊಲೀಸ್ ಆಯುಕ್ತರ ಮೇಲೆಯೇ ಹಾಕಲಾಗಿದೆ. ಅವರನ್ನು ಅಮಾನತು ಮಾಡಿ ಬಳಿಕ ಹಿಂಪಡೆದಿರಿ. ಆದರೆ ತಪ್ಪು ಮಾಡಿದ ಸರ್ಕಾರ ಅಪರಾಧಿ ಸ್ಥಾನದಲ್ಲಿದೆ ಎಂದು ಅವರು ಟೀಕಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ 11 ಮಂದಿ ಸತ್ತ ಮೇಲೂ ನೀವು ಕಾರ್ಯಕ್ರಮ ಮಾಡಿದಿರಿ. ಸಿ ಎಂ ದೋಸೆ ತಿನ್ನಲು ಹೋದರು. ಆಸ್ಪತ್ರೆಯಲ್ಲಿ ನರಳಾಡಿದವರ ಮೇಲೆ ಕರುಣೆ ಇಲ್ಲದ ಸರ್ಕಾರ ನಿಮ್ಮದು. ಗೃಹ ಸಚಿವರು ಎಲ್ಲವನ್ನೂ ಮುಚ್ಚಿಟ್ಟರು. ನಿಮ್ಮ ಸರ್ಕಾರದ್ದು ಕಲ್ಲು ಹೃದಯ ಎಂದು ಲೇವಡಿ ಮಾಡಿದರು.
























