ಬೆಂಗಳೂರು: ಈ ಬಾರಿಯ ಗಣೇಶೋತ್ಸವಕ್ಕೆ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನೇ ಬಳಕೆ ಮಾಡುವಂತೆ ಸಚಿವ ಈಶ್ವರ ಖಂಡ್ರೆ ಅವರು ಮನವಿ ಮಾಡಿದ್ದು, ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳ ಬಳಕೆ ಮಾಡುವುದಿಲ್ಲ ಎಂದು ಗಣೇಶ ಕೂರಿಸುವವರಿಂದ ಮುಚ್ಚಳಿಕೆ ಬರೆಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮೊದಲಾದ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಣ್ಣಿನ ಗಣಪತಿಯನ್ನೇ ಪೂಜೆಗೆ ಕೂರಿಸುತ್ತಾರೆ. ಹಾಗಿರುವಾಗ ಇದು ಉಳಿದ ಜಿಲ್ಲೆಗಳಲ್ಲಿ ಏಕೆ ಸಾಧ್ಯವಿಲ್ಲ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಆಡಳಿತ ಮತ್ತು ಜನರ ಸಹಕಾರದಿಂದ, ಸಹಯೋಗದಿಂದ ಪಿಒಪಿ ಮೂರ್ತಿ ಸಂಪೂರ್ಣ ನಿಷೇಧ ಸಾಧ್ಯ. ನಾವು ಭೂಮಿಯನ್ನು ಮುಂದಿನ ಪರಂಪರೆಗೂ ತಲುಪಿಸುವ ಕೆಲಸ ಮಾಡಬೇಕು. ನಮ್ಮ ಪೂರ್ವಜರು ಸಹ ಮಣ್ಣಿನ ಗಣೇಶನನ್ನೇ ಪೂಜೆ ಮಾಡುತ್ತಿದ್ದರು ಎಂದು ಅವರು ನುಡಿದಿದ್ದಾರೆ.
























