ನವದೆಹಲಿ: ವಿರೋಧ ಪಕ್ಷಗಳ ಪ್ರತಿಭಾನ್ವಿತ ಯುವ ನಾಯಕರ ಉಪಸ್ಥಿತಿ ರಾಹುಲ್ ಗಾಂಧಿಗೆ ಅಸುರಕ್ಷಿತ ಮತ್ತು ಆತಂಕ ಸೃಷ್ಟಿ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಅವರು ವ್ಯಂಗ್ಯ ಮಾಡಿದ್ದಾರೆ.
ಎನ್‌ಡಿಎ ಸದಸ್ಯರ ಉಪಹಾರ ಸಭೆಯಲ್ಲಿ ಮಾತನಾಡಿದ ಅವರು, ವಿಪಕ್ಷದಲ್ಲಿ ಹಲವಾರು ಪ್ರತಿಭಾನ್ವಿತ ನಾಯಕರಿದ್ದರೂ ಅವರಿಗೆ ಕೌಟುಂಬಿಕ ಅಭದ್ರತೆಯ ಕಾರಣಕ್ಕೆ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಹಾಗೆಯೇ, ಇತ್ತೀಚೆಗೆ ಅಂತ್ಯವಾದ ಸಂಸತ್ ಅಧಿವೇಶನ ಉತ್ತಮವಾಗಿತ್ತು. ಅದರಲ್ಲಿ ಹಲವಾರು ಪ್ರಮುಖ ಮಸೂದೆಗಳು ಅಂಗೀಕಾರಗೊಂಡಿವೆ ಎಂದರು. ಹಾಗೆಯೇ ಪ್ರಮುಖ ಮಸೂದೆಗಳ ಮೇಲಿನ ಚರ್ಚೆಯಿಂದ ಹೊರಗುಳಿದ ವಿಪಕ್ಷಗಳನ್ನು ಪ್ರಧಾನಿ ಟೀಕಿಸಿದರು. ಕೆಲವರು ಕೇವಲ ಅಡಚಣೆಗಳನ್ನು ಉಂಟು ಮಾಡುವುದರಲ್ಲಿ ಮಾತ್ರ ತಲ್ಲೀನರಾಗಿದ್ದರು ಎಂದು ವಿಪಕ್ಷಗಳ ನಡೆಯ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
























