ಆ.24 : ನಿಂತಿಕಲ್ಲಿನಲ್ಲಿರುವ ಸಾಧನಾ ಸಹಕಾರ ಸೌಧದ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ | ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಪುತ್ತೂರು ಸಮರ್ಪಣಾ ಚಾರಿಟೇಬಲ್‍ ಟ್ರಸ್ಟ್ ಜಂಟಿ ಆಶ್ರಯ | ದೇರಳಕಟ್ಟೆ ಜಸ್ಟೀಸ್‍ ಕೆ.ಎಸ್‍.ಹೆಗ್ಡೆ ಚಾರಿಟೇಬಲ್‍ ಆಸ್ಪತ್ರೆ ಸಹಯೋಗ

ಎಣ್ಮೂರು: ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಪುತ್ತೂರು ಸಮರ್ಪಣಾ ಚಾರಿಟೇಬಲ್‍ ಟ್ರಸ್ಟ್ ಜಂಟಿ ಆಶ್ರಯದಲ್ಲಿ ದೇರಳಕಟ್ಟೆ ಜಸ್ಟೀಸ್‍ ಕೆ.ಎಸ್‍.ಹೆಗ್ಡೆ ಚಾರಿಟೇಬಲ್‍ ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆ.24 ಭಾನುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1.30 ರ ವರೆಗೆ ನಿಂತಿಕಲ್ಲಿನಲ್ಲಿರುವ ಸಾಧನಾ ಸಹಕಾರ ಸೌಧದ ಆವರಣದಲ್ಲಿ ನಡೆಯಲಿದೆ.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಶಿಬಿರ ಉದ್ಘಾಟಿಸಲಿದ್ದು, ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ನಡುಬೈಲು ಅಧ್ಯಕ್ಷತೆ ವಹಿಸಲಿದ್ದಾರೆ. ಸ್ಟೂಡೆಂಟ್ಸ್‍ ಅಪೇರ್ಸ್‍ ಕ್ಷೇಮದ ನಿರ್ದೇಶಕ ಪ್ರೊ.ಮಹಾಬಲೇಶ್‍ ಶೆಟ್ಟಿ, ಪುತ್ತೂರು ಸಮರ್ಪಣಾ ಚಾರಿಟೇಬಲ್‍ ಟ್ರಸ್ಟ್ ಅಧ್ಯಕ್ಷ ಕೆ.ರಾಜೇಂದ್ರ ಪ್ರಸಾದ್‍ ಶೆಟ್ಟಿ ಎಣ್ಮೂರುಗುತ್ತು ಗೌರವ ಉಪಸ್ಥಿತರಿರುವರು

ಶಿಬಿರದಲ್ಲಿ ತಜ್ಞ ವೈದ್ಯರುಗಳಿಂದ ಸಾಮಾನ್ಯ ವೈದ್ಯಕೀಯ ತಪಾಸಣೆ, ರಕ್ತದೊತ್ತಡ (ಬಿ.ಪಿ) ಮತ್ತು ಮಧುಮೇಹ (ಶುಗರ್) ತಪಾಸಣೆ, ಎಲುಬು ಮತ್ತು ಕೀಲು, ಕಿವಿ, ಮೂಗು, ಗಂಟಲು, ಥೈರಾಯ್ಡ್‍ ಹಾಗೂ ಶಸ್ತ್ರ ಚಿಕಿತ್ಸಾ ತಪಾಸಣೆ ಲಭ್ಯವಿದೆ. ಅಲ್ಲದೆ ವೈದ್ಯರು ಸೂಚಿಸಿದವರಿಗೆ ಇಸಿಜಿ ಪರೀಕ್ಷೆ ಉಚಿತವಾಗಿ ಮಾಡಲಾಗುವುದು, ಶಿಬಿರದಲ್ಲಿ ಲಭ್ಯವಿರುವ ಔಷಧಿಗಳನ್ನು ಉಚಿತವಾಗಿ ಕೊಡಲಾಗುವುದು. ಮೂರು ತಿಂಗಳ ಮಗುವಿನಿಂದ 70 ವರ್ಷದ ಹಿರಿಯರ ತನಕ “ಕ್ಷೇಮ ಹೆಲ್ತ್‍ ಕಾರ್ಡ್‍” ನೋಂದಾವಣೆ ಮಾಡಲಾಗುವುದು ಎಂದು ಸಂಘದ ಸಿಇಒ ಚಿದಾನಂದ ರೈ, ಅಧ್ಯಕ್ಷ ವಸಂತ ನಡುಬೈಲು, ಸಮರ್ಪಣಾ ಚಾರಿಟೇಬಲ್‍ ಟ್ರಸ್ಟ್ ಅಧ್ಯಕ್ಷ ಕೆ.ರಾಜೇಂದ್ರ ಪ್ರಸಾದ್‍ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





















































 
 

ಹೆಚ್ಚಿನ ಮಾಹಿತಿಗಾಗಿ : 7022651139, 9448302732, 9449944664, 9741489163, 9483139590, 8197485717

ಉಚಿತ ಆರೋಗ್ಯ ಶಿಬಿರದ ಆಮಂತ್ರಣ ಪತ್ರಿಕೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಸಂಘದ ಸಿಇಒ ಚಿದಾನಂದ ರೈ, ಅಧ್ಯಕ್ಷ ವಸಂತ ನಡುಬೈಲು, ಸಮರ್ಪಣಾ ಚಾರಿಟೇಬಲ್‍ ಟ್ರಸ್ಟ್ ಅಧ್ಯಕ್ಷ ಕೆ.ರಾಜೇಂದ್ರ ಪ್ರಸಾದ್‍ ಶೆಟ್ಟಿ ಉಪಸ್ಥಿತರಿದ್ದರು.

error: Content is protected !!
Scroll to Top