ನವದೆಹಲಿ: ಮುಂಗಾರು ಅಧಿವೇಶನವು ವಿರೋಧ ಪಕ್ಷಗಳ ಪ್ರತಿಭಟನೆ, ಕಲಾಪಕ್ಕೆ ಅಡ್ಡಿ, ಸಭಾತ್ಯಾಗ ಮೊದಲಾದ ಘಟನೆಗಳ ಜೊತೆಗೆ ಮುಕ್ತಾಯವಾಗಿದ್ದು, ಲೋಕಸಭಾ ಅಧಿವೇಶನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ.
ಮತದಾರರ ಪಟ್ಟಿ ಪರಿಷ್ಕರಣೆಯ ಬಗ್ಗೆ ವಿಪಕ್ಷಗಳು ಕೋಲಾಹಲ ಸೃಷ್ಟಿ ಮಾಡಿದ್ದು, ಇದರಿಂದಾಗಿ ಮಧ್ಯಾಹ್ನ 12 ರ ವರೆಗೆ ಕಲಾಪವನ್ನು ಸ್ಪೀಕರ್ ಮುಂದೂಡಿ ಆದೇಶ ನೀಡಿದ್ದರು. ಇಂದು ಅಧಿವೇಶನದ ಕೊನೆಯ ದಿನವಾಗಿದ್ದು ಈ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿ ಕದನದಲ್ಲಿ ಗದ್ದಲ ಎಬ್ಬಿಸುವವರಿಗೆ ಸ್ಪೀಕರ್ ಓಂ ಬಿರ್ಲಾ ಅವರು ತಿರುಗೇಟು ನೀಡಿದ್ದಾರೆ.
ವಿಪಕ್ಷಗಳ ಗದ್ದಲದ ನಡುವೆಯೂ ಆಡಳಿತಾರೂಢ NDA ಸರ್ಕಾರ ಹಲವಾರು ಮಸೂದೆಗಳನ್ನು ಮಂಡನೆ ಮಾಡಿದೆ. ಮಂಡಿಸಲಾದ ಒಟ್ಟು 14 ಮಸೂದೆಗಳಲ್ಲಿ 12 ಮಸೂದೆಗಳು ಅಂಗೀಕಾರವಾಗಿದೆ ಎಂದು ಸ್ಪೀಕರ್ ಮಾಹಿತಿ ನೀಡಿದ್ದಾರೆ.
























