ಮಾಜಿ ಉಪರಾಷ್ಟ್ರಪತಿ ಧನ್ಕರ್ ಮೌನದ ಕಾರಣವೇನು?: ರಾಗಾ ಪ್ರಶ್ನೆ

ನವದೆಹಲಿ: ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರು ತಮ್ಮ ರಾಜೀನಾಮೆಯ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಇದ್ದು, ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನೆ ಎತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಧನ್ಕರ್ ರಾಜೀನಾಮೆ ನೀಡಿದ ಬಳಿಕ ಕೆ.ಸಿ.‌ ವೇಣುಗೋಪಾಲ್ ಅವರು ತನಗೆ ಕರೆ ಮಾಡಿ ಈ ವಿಷಯವನ್ನು ತಿಳಿಸಿದರು. ಅವರ ರಾಜೀನಾಮೆಯ ಹಿಂದೆ ದೊಡ್ಡ ಕಥೆ ಇದೆ. ಆ‌ಕಥೆ ಏನು ಎಂಬುದು ನಮ್ಮಲ್ಲಿ ಹಲವರಿಗೆ ತಿಳಿದಿರಬಹುದು ಎಂದಿದ್ದಾರೆ.

ವಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿ ಬಿ.‌ ಸುದರ್ಶನ್ ರೆಡ್ಡಿ ಅವರ ಅಭಿನಂದನಾ ಸಭೆಯಲ್ಲಿ ರಾಹುಲ್ ಈ ಬಗ್ಗೆ ಮಾತನಾಡಿದ್ದು, ಧನ್ಕರ್ ಸಾರ್ವಜನಿಕವಾಗಿ ಏಕೆ ಕಾಣಿಸಿಕೊಳ್ಳುತ್ತಿಲ್ಲ? ಆವರು ಯಾಕೆ ಅಡಗಿಕೊಂಡಿದ್ದಾರೆ. ಭಾರತದ ಮಾಜಿ ಉಪರಾಷ್ಟ್ರಪತಿಯೊಬ್ಬರು ಮಾತನ್ನೇ ಆಡದೆ ಏಕಿದ್ದಾರೆ ಎನ್ನುವ ಸಂಗತಿ ಜನರಿಗೆ ತಿಳಿಯಬೇಕಿದೆ ಎಂದರು.





















































 
 

ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಪ್ರತಿಯೊಂದು ಮಾತಿಗೂ ‌ಸಿಡಿಮಿಡಿಗೊಳ್ಳುತ್ತಿದ್ದ ವ್ಯಕ್ತಿ ಈಗ ಮೌನವಾಗಿದ್ದಾರೆ‌. ಈ ವಿಷಯ ನಾವು ಯಾವ ಕಾಲಘಟ್ಟದಲ್ಲಿ ಇದ್ದೇವೆ ಎನ್ನುವುದಕ್ಕೆ ಸಾಕ್ಷಿ ಎಂದು ಅವರು ನುಡಿದಿದ್ದಾರೆ‌.

error: Content is protected !!
Scroll to Top