ಅನನ್ಯಾ ಭಟ್‌ ನಾಪತ್ತೆ ಪ್ರಕರಣ ಎಸ್‌ಐಟಿಗೆ ಹಸ್ತಾಂತರ

ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾರೆ ಎನ್ನಲಾಗಿರುವ ಅನನ್ಯಾ ಭಟ್‌

ಬೆಂಗಳೂರು: ಅನನ್ಯಾ ಭಟ್ ಎಂಬ ವೈದ್ಯಕೀಯ ವಿದ್ಯಾರ್ಥಿನಿ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾರೆ ಎನ್ನಲಾದ ಪ್ರಕರಣದ ತನಿಖೆಯನ್ನು ಅಧಿಕೃತವಾಗಿ ಎಸ್‌ಐಟಿಗೆ ಹಸ್ತಾಂತರಿಸಲಾಗಿದೆ. ಡಿಜಿ&ಐಜಿಪಿ ಆದೇಶದಂತೆ ಮುಂದಿನ ವಿಚಾರಣೆಗಾಗಿ ಅನನ್ಯಾ ಭಟ್ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಲಾಗಿದೆ.

2003ರಲ್ಲಿ ಧರ್ಮಸ್ಥಳ ದೇವಸ್ಥಾನದ ಪರಿಸರದಿಂದ ತನ್ನ ಪುತ್ರಿ ಅನನ್ಯಾ ಭಟ್ ಕಾಣೆಯಾಗಿದ್ದ ಬಗ್ಗೆ ತಾಯಿ ಸುಜಾತ ಭಟ್ ಎಂಬವರು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು.





















































 
 

ತನ್ನ ಮಗಳು ಅನನ್ಯಾ ಭಟ್ ಮಣಿಪಾಲದಲ್ಲಿ ವೈದ್ಯಕೀಯ ಶಿಕ್ಷಣ ಓದುತ್ತಿದ್ದವರು ಧರ್ಮಸ್ಥಳಕ್ಕೆ ತೆರಳಿದ ನಂತರ ನಾಪತ್ತೆಯಾಗಿದ್ದರು. ಆಕೆಯನ್ನು ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು ಎಂದು ತಾಯಿ ಆರೋಪಿಸಿದ್ದಾರೆ. ಈ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲಿ ಕಳೆದ ಕೆಲವು ದಿನಗಳಿಂದ ಬಹಳ ಚರ್ಚೆಯಾಗುತ್ತಿದೆ. ಅನನ್ಯಾ ಭಟ್ ತಾಯಿ ಎನ್ನಲಾದ ಸುಜಾತಾ ಭಟ್ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ನೀಡಿದ್ದಾರೆ.

ಸುಜಾತ ಭಟ್ 1964 ಅಥವಾ 65 ಜನಿಸಿದ್ದಾರೆ. 10ನೇ ತರಗತಿಯಲ್ಲಿರುವಾಗ ಮನೆ ಬಿಟ್ಟು ಹೋಗಿದ್ದರು. ಆ ಬಳಿಕ ಅವರು ಯಾರ ಜೊತೆ ಇದ್ದಾರೆ, ಎಲ್ಲಿದ್ದಾರೆ ಎಂಬುದರ ಬಗ್ಗೆ ನಮಗೆ ಮಾಹಿತಿಯೇ ಇಲ್ಲ. ಮನೆಯಿಂದ ಹೋದವರು ಕೆಲವು ದಿನಗಳ ಬಳಿಕ ಉಡುಪಿಯ ನಿಟ್ಟೂರಿನ ರಿಮಾಂಡ್ ಹೋಮ್‌ನಲ್ಲಿ ಇದ್ದರು ಎಂಬ ಮಾಹಿತಿ ನಮಗೆ ಬಂದಿತ್ತು ಎಂದು ಈ ನಡುವೆ ಅನನ್ಯಾ ಭಟ್​ ತಾಯಿ ಎನ್ನಲಾಗಿರುವ ಸುಜಾತ ಭಟ್​ ಅವರ ಸಹೋದರ ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದಾರೆ.

ಅಲ್ಲಿ ಎಷ್ಟು ದಿವಸ ಇದ್ದರು ಎನ್ನುವ ಬಗ್ಗೆ ನಮಗೆ ಮಾಹಿತಿ ಸಿಗಲಿಲ್ಲ. ಮನೆಯಲ್ಲಿರುವಾಗ ಮದುವೆಯಾಗಿರಲಿಲ್ಲ. ಸುಜಾತ ಭಟ್ ಹೇಳುವುದೆಲ್ಲವೂ ಸುಳ್ಳು. ಪರೀಕದಲ್ಲಿರುವ ಜಾಗ ಅಜ್ಜನಿಗೆ ದಾನವಾಗಿ ಬಂದದ್ದು. ಅಜ್ಜನೊಟ್ಟಿಗೆ ಇದ್ದು ಪರೀಕದ ಜಾಗವನ್ನು ತಂದೆ ನೋಡಿಕೊಳ್ಳುತ್ತಿದ್ದರು. ಧರ್ಮಸ್ಥಳದ ಹೆಸರಿಗೆ ಪರೀಕ ಜಾಗವನ್ನು ದುಡ್ಡಿಗೆ ಕೊಟ್ಟಿದ್ದಾರಾ ಅಥವಾ ದಾನವಾಗಿ ಕೊಟ್ಟಿದ್ದರಾ ಎಂದು ನಮಗೆ ಮಾಹಿತಿ ಇಲ್ಲ ಎಂದಿದ್ದಾರೆ.

error: Content is protected !!
Scroll to Top