9ನೇ ತರಗತಿ ಮಕ್ಕಳಿಗೆ ಓಪನ್‌ ಬುಕ್‌ ಎಕ್ಸಾಮ್‌ ಪದ್ಧತಿ ಅಳವಡಿಸಲು ನಿರ್ಧಾರ

ಪಠ್ಯಪುಸ್ತಕ ನೋಡಿ ಪರೀಕ್ಷೆ ಬರೆಯಬಹುದು

ನವದೆಹಲಿ: ಮಕ್ಕಳ ಪರೀಕ್ಷೆ ಒತ್ತಡ ನಿವಾರಿಸಲು ಮಹತ್ವದ ಹೆಜ್ಜೆಯಿಟ್ಟಿರುವ ಕೇಂದ್ರೀಯ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 2026-27ನೇ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವಂತೆ 9ನೇ ತರಗತಿ ವಿದ್ಯಾರ್ಥಿಗಳಿಗೆ ತೆರೆದ ಪುಸ್ತಕ (ಓಪನ್ ಬುಕ್) ಪರೀಕ್ಷೆ ಜಾರಿಗೊಳಿಸಲು ನಿರ್ಧಾರ ಕೈಗೊಂಡಿದೆ. ಈ ಹೊಸ ನೀತಿಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯಲು ಅವಕಾಶ ಸಿಗಲಿದೆ.

ಮುಂದಿನ ಶೈಕ್ಷಣಿಕ ವರ್ಷದಿಂದ ತೆರೆದ ಪುಸ್ತಕ ಪರೀಕ್ಷಾ ಪದ್ಧತಿ ಜಾರಿ ಮಾಡಲಾಗುತ್ತಿದೆ. ಹಳೆಯ ಪರೀಕ್ಷಾ ಪದ್ಧತಿ ಕಂಠಪಾಠಕ್ಕೆ ಆದ್ಯತೆ ಕೊಡುತ್ತದೆ ಎನ್ನುವ ವಾದ ಇತ್ತು. ಈಗಿನ ಹೊಸ ಪರೀಕ್ಷಾ ಪದ್ಧತಿ ವಿದ್ಯಾರ್ಥಿಯ ಸಾಮರ್ಥ್ಯವನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಇಂತಹ ಕ್ರಮ ಆಯ್ಕೆ ಮಾಡುವ, ಅನುಸರಿಸುವ ಹಕ್ಕು ಆಯಾ ಶಾಲೆಗಳಿಗೆ ಬಿಟ್ಟಿರುತ್ತದೆ. ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು-2023 ರಾಷ್ಟ್ರೀಯ ಶಿಕ್ಷಣ ನೀತಿ 2020ರ ಸಮನ್ವಯದೊಂದಿಗೆ ಹೊಸ ಪಠ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದೆ.





















































 
 

ಮುಖ್ಯ ಕಲಿಕಾ ವಿಷಯಗಳಾದ ಭಾಷೆ, ಗಣಿತ, ವಿಜ್ಞಾನ ಸಮಾಜ ವಿಜ್ಞಾನವನ್ನು ಇದು ಒಳಗೊಳ್ಳಲಿದೆ. ಈ ಕ್ರಮವನ್ನು ಆಯ್ಕೆ ಮಾಡಿಕೊಳ್ಳುವ ಅಥವಾ ಬಿಡುವ ಸ್ವಾತಂತ್ರ್ಯವನ್ನು ಶಾಲೆಗಳಿಗೆ ನೀಡಲಾಗಿದೆ.

ತೆರೆದ ಪುಸ್ತಕ ಪರೀಕ್ಷೆಗಳನ್ನು ಜಾರಿಗೆ ತಂದ ನಂತರ 9ನೇ ತರಗತಿಯ ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಪ್ರಶ್ನೆಗಳಿಗೆ ಉತ್ತರಿಸುವಾಗ ಪಠ್ಯಪುಸ್ತಕಗಳು, ತರಗತಿ ಟಿಪ್ಪಣಿಗಳು, ಗ್ರಂಥಾಲಯ ಪುಸ್ತಕಗಳನ್ನು ಬಳಸುವ ಅವಕಾಶವಿರುತ್ತದೆ. 9ನೇ ತರಗತಿಯಲ್ಲಿ ತೆರೆದ ಪುಸ್ತಕ ಪುಸ್ತಕ ಪರೀಕ್ಷೆಗಳನ್ನು ಪ್ರತಿ ಅವಧಿಗೆ 3 ಪೆನ್‌-ಪೇಪರ್ ಮೌಲ್ಯಮಾಪನಗಳ ಭಾಗವಾಗಿ ಸಂಯೋಜಿಸಲಾಗುತ್ತದೆ. ಇದು ಭಾಷೆ, ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನಗಳಂತಹ ಪ್ರಮುಖ ವಿಷಯಗಳನ್ನು ಒಳಗೊಂಡಿದೆ. ಶಾಲೆಗಳು ಇದನ್ನು ಶಿಫಾರಸು ಮಾಡುತ್ತವೆ. ಆದರೆ ಅದರ ಅನುಷ್ಠಾನವು ಕಡ್ಡಾಯವಾಗಿರುವುದಿಲ್ಲ.

ಸಿಬಿಎಸ್‌ಇ ಓಪನ್-ಬುಕ್ ಪರೀಕ್ಷೆಯನ್ನು ಬಳಸುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು 2014ರಲ್ಲಿ ಓಪನ್-ಬುಕ್ ಪರೀಕ್ಷೆಯನ್ನು ನಡೆಸಿತ್ತು. ನಂತರ ಅದನ್ನು ಓಪನ್ ಟೆಕ್ಸ್ ಬೇಸ್ಟ್ ಅಸೆಸ್ಟೆಂಟ್ ಎಂದು ಹೆಸರಿಸಲಾಯಿತು. ಈ ಅವಧಿಯಲ್ಲಿ 9ನೇ ತರಗತಿಯಲ್ಲಿ ಹಿಂದಿ, ಇಂಗ್ಲಿಷ್, ಗಣಿತ ಮತ್ತು ಸಮಾಜ ವಿಜ್ಞಾನದ ಅಂತಿಮ ಪರೀಕ್ಷೆಗಳಲ್ಲಿ ಮತ್ತು 11ನೇ ತರಗತಿಯಲ್ಲಿ ಅರ್ಥಶಾಸ್ತ್ರ, ಜೀವಶಾಸ್ತ್ರ ಮತ್ತು ಭೂಗೋಳಶಾಸ್ತ್ರದಲ್ಲಿ ಒಟಿಬಿಎ ಅನ್ನು ಪ್ರಯತ್ನಿಸಲಾಯಿತು. ಆದಾಗ್ಯೂ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನಾ ಕೌಶಲಗಳನ್ನು ಅಭಿವೃದ್ಧಿಪಡಿಸುವಲ್ಲಿ ಇದು ಯಶಸ್ವಿಯಾಗಿಲ್ಲ ಎಂದು ಕಾರಣ ನೀಡಿ 2017-18ರಲ್ಲಿ ಅದನ್ನು ನಿಲ್ಲಿಸಲಾಯಿತು.

error: Content is protected !!
Scroll to Top