ಭಾರತದ ಬಾಹ್ಯಾಕಾಶ ಯೋಜನೆಗಳಿಗೆ ಶುಕ್ಲಾ ಅವರ ಅನುಭವ ಮೌಲ್ಯಯುತವಾದದ್ದು: ಪ್ರಧಾನಿ ಮೋದಿ

Posts

ನವದೆಹಲಿ: ಬಾಹ್ಯಾಕಾಶಯಾನ ಮುಗಿಸಿದ ಬಳಿಕ ಭಾರತಕ್ಕೆ ಬಂದ ಗಗನಯಾನಿ ಶುಭಂಶು ಶುಕ್ಲಾ ಆವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ ಭವಿಷ್ಯದ ಬಾಹ್ಯಾಕಾಶ ಯೋಜನೆಗಳಿಗಾಗಿ ಭಾರತ 40-50 ಗಗನಯಾನಿಗಳ ಗುಂಪನ್ನು ನಿರ್ಮಾಣ ಮಾಡಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶುಕ್ಲಾ ಅವರು ಸೋಮವಾರ ಸಂಜೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ತಮ್ಮ ಬಾಹ್ಯಾಕಾಶ‌ಯಾನದ ಅನುಭವಗಳನ್ನು ಹಂಚಿಕೊಂಡರು.





















































 
 

ಆ ಬಳಿಕ ಪ್ರಧಾನಿ ಮೋದಿ ಮಾತನಾಡಿದ್ದು, ಶುಕ್ಲಾ ಅವರ ಬಾಹ್ಯಾಕಾಶ‌ ಪ್ರಯಾಣ ಭವಿಷ್ಯದ ಕಾರ್ಯಾಚರಣೆಗಳಿಗೆ ಮೊದಲ ಹೆಜ್ಜೆಯಾಗಿದೆ. ಈ ಯಾನ ಬಾಹ್ಯಾಕಾಶ ವಲಯದಲ್ಲಿ ಮತ್ತಷ್ಟು ನಂಬಿಕೆ, ಆಸಕ್ತಿಯನ್ನು ಹುಟ್ಟು ಹಾಕಿದೆ. ಭಾರತವು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ, ಗಗನಯಾನ ಯೋಜನೆಗಳನ್ನು ಸಹ ಹೊಂದಿದೆ. ಆ ಹಾದಿಯಲ್ಲಿ ಶುಕ್ಲಾ ಅನುಭವ ಮೌಲ್ಯಯುತವಾದದ್ದು ಎಂದು ಅವರು ನುಡಿದಿದ್ದಾರೆ‌.

error: Content is protected !!
Scroll to Top