ಮುಂದಿನ ಪ್ರಧಾನಿ ರಾಹುಲ್ ಗಾಂಧಿ: ತೇಜಸ್ವಿ ಯಾದವ್

ಬಿಹಾರ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಅವರು ಪ್ರಧಾನಮಂತ್ರಿ ಪಟ್ಟ ಅಲಂಕರಿಸಲಿದ್ದಾರೆ ಎಂದು RJD ನಾಯಕ ತೇಜಸ್ವಿ ಯಾದವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನವಾಡದಲ್ಲಿ ‘ಮತದಾರ ಅಧಿಕಾರ ಯಾತ್ರೆ’ ಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಳೆಯ, ಅಶಕ್ತ ಎನ್‌ಡಿ‌ಎ ಸರ್ಕಾರವನ್ನು ಕಿತ್ತು ಹಾಕಿ, ರಾಹುಲ್ ಗಾಂಧಿಯನ್ನು ಪ್ರಧಾನಿಯನ್ನಾಗಿ ಮಾಡಲು ಯುವಕರು ದೃಢನಿಶ್ಚಯ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ರಾಜ್ಯವನ್ನು ಮುನ್ನಡೆಸಲು ಯುವ ಪೀಳಿಗೆಗೆ ಅವಕಾಶ ಸಿಗುವ ಕಾಲ ಬಂದಿದೆ. ನಿತೀಶ್ ಕುಮಾರ್ ಅಧಿಕಾರ ಕೆಳಗಿಳಿಸಿ,‌ಯುವ ಜನರಿಗೆ ಅವಕಾಶ ದೊರೆಯುವ ಹಾಗಾಗಬೇಕು ಎಂದು ಹೇಳಿದ್ದಾರೆ.





















































 
 

ಹಾಗೆಯೇ ಬಿಹಾರದ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಕುತಂತ್ರ ಎಂದು ಹೇಳಿರುವ ಅವರು, ಇದು ಮತದಾರರ ಹಕ್ಕನ್ನು ಕಸಿದುಕೊಳ್ಳುವ ಕಸರತ್ತು ಎಂಬುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

error: Content is protected !!
Scroll to Top