ಸಂವಿಧಾನ ಉಳಿಸುವುದಾಗಿ ಹೇಳುವವರೇ ಅದನ್ನು ತುಳಿಯುತ್ತಿದ್ದಾರೆ: ಪ್ರಧಾನಿ ಮೋದಿ

ನವದೆಹಲಿ: ಸಂವಿಧಾನವನ್ನು ತಲೆ ಮೇಲೆ ಹೊತ್ತು ಕುಣಿದಾಡಿದವರು ಸಂವಿಧಾನವನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ.

ದಶಕಗಳಿಂದ ದಬ್ಬಾಳಿಕೆಯ ಕಾನೂನುಗಳನ್ನು ಉಳಿಸಿಕೊಂಡು ಬಂದು ಡಾ. ಅಂಬೇಡ್ಕರ್ ಅವರ ನಿಲುವುಗಳಿಗೆ ಧಕ್ಕೆ ತರಲಾಗಿದೆ. ಹಿಂದಿನ ಸರ್ಕಾರಗಳು ಪೌರ ಕಾರ್ಮಿಕರನ್ನು ಗುಲಾಮರ ಹಾಗೆ ನಡೆಸಿಕೊಂಡಿದ್ದವು. ಹಾಗೆಯೇ . ದಿಲ್ಲಿ ಪಾಲಿಕೆಯ ನಿಯಮದನ್ವಯ ಅನುಮತಿ ಪಡೆಯದೆ ರಜೆ‌‌ ಮಾಡುವ ಪೌರ ಕಾರ್ಮಿಕರಿಗೆ 1 ತಿಂಗಳ ಜೈಲು ಶಿಕ್ಷೆ ನೀಡಲಾಗುತ್ತಿತ್ತು. ಸಾಮಾಜಿಕ ನ್ಯಾಯದ ಬಗ್ಗೆ ಭಾಷಣ ಮಾಡುವವರೇ ಇಂತಹ ಕಾನೂನುಗಳನ್ನು ಜಾರಿಗೆ ತಂದಿದ್ದರು. ನಮ್ಮ ಸರ್ಕಾರ ಅಂತಹ ಕಾನೂನುಗಳನ್ನು ರದ್ದು ಮಾಡುವ ಕೆಲಸ‌ ಮಾಡುತ್ತಿದೆ ಎಂದು ಅವರು ನುಡಿದಿದ್ದಾರೆ.

ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರಗಳಿಗೆ ಹೊಸ ಜಿಎಸ್‌ಟಿ ಸುಧಾರಣೆಗೆ ಸಹಕರಿಸುವಂತೆಯೂ ಮನವಿ ಮಾಡಿದರು.





















































 
 
error: Content is protected !!
Scroll to Top