ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ವರ್ತನೆ | ರವಿ ರಾಮಕುಂಜ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವಿಎಚ್‍ ಪಿಯಿಂದ ನಗರ ಠಾಣೆಗೆ ದೂರು

ಪುತ್ತೂರು: ಕೃಷ್ಣನ ವೇಷ ಧರಿಸಿ ಹಿಂದುಗಳ ಧಾರ್ಮಿಕ ಭಾವನೆಗೆ ದಕ್ಕೆ ಬರುವ ರೀತಿ ವರ್ತನೆ ಮಾಡಿದ ರವಿ ರಾಮಕುಂಜ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್‍ ಹಾಗೂ ಮೊಸರು ಕುಡಿಕೆ ಉತ್ಸವ ಸಮಿತಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದೆ.

ರವಿ ರಾಮ ಕುಂಜ ಎಂಬ ಕಲಾವಿದ ಶ್ರೀ ಕೃಷ್ಣನ ವೇಷ ದರಿಸಿ ನಾಟಕ ಪಾತ್ರ ಮಾಡುವ ಸಂರ್ಭದಲ್ಲಿ ಹೆಣ್ಣ (ಮಾತೆಯ) ನ್ನು ಅಪ್ಪಿ ಕೊಳ್ಳಲು ಹೇಳಿದ್ದು ಅಲ್ಲದೆ ಪೂಜೆಯಲ್ಲಿ ನಿರತವಾಗಿದ್ದ ಮಾತೆಯ ಎದುರು ಕೃಷ್ಣನ ವೇಷ ಧರಿಸಿ ಹಣ ಕೇಳುವ ಮಾತುಗಳನ್ನಾಡಿದಲ್ಲದೆ ಕೃಷ್ಣ ನ ಹಲವು ನಾಮಗಳನ್ನು ಹೇಳಿ ಕಡೆಗೆ “ಸತ್ತ” ಎಂಬ ಪದವನ್ನು ಬಳಸಿದ್ದು, ಈ ಕೃಷ್ಣ ವೇಷದಾರಿಯಾದ ರವಿ ರಾಮ ಕುಂಜರವರ ಈ ಕೆಟ್ಟ ವರ್ತನೆಯಿಂದ ಕೃಷ್ಣ ನನ್ನು ದೇವರೆಂದು ನಂಬಿಕೊಂಡು ಬಂದಂತ ಎಲ್ಲಾ ಹಿಂದುಗಳ ಭಾವನೆಗೆ ದಕ್ಕೆ ಬಂದಿದೆ. ಈ ರೀತಿಯಾಗಿ ಧಾರ್ಮಿಕ ಭಾವನೆಗೆ ದಕ್ಕೆ ತಂದ ರವಿ ರಾಮ ಕುಂಜ ವಿರುದ್ಧ ಸೂಕ್ತ ಕಾನೂನು ಕ್ರಮ ಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಿದೆ.

ಮನವಿ ನೀಡಿಕೆ ಸಂದರ್ಭ ಜಿಲ್ಲಾ ಅಧ್ಯಕ್ಷ ಡಾ.ಕೃಷ್ಣ ಪ್ರಸನ್ನ, ಮುರಳೀಕೃಷ್ಣ ಹಸಂತಡ್ಕ, ದಾಮೋದರ ಪಾಟಾಳಿ, ಕಾನೂನು ಸಲಹೆಗಾರ ಮಾಧವ, ಉಪಸ್ಥಿತರಿದ್ದರು.





















































 
 
error: Content is protected !!
Scroll to Top