ಬೆಳಗಾವಿ: ಧಾರ್ಮಿಕ ಶ್ರದ್ಧಾ ಕೇಂದ್ರ ಧರ್ಮಸ್ಥಳದ ಮೇಲೆ ಅಪಪ್ರಚಾರ ಮಾಡುತ್ತಿರುವವರ ಮೇಲೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಾಮಿಕ ದೂರುದಾರನನ್ನು ಬಂಧಿಸಿ ಈ ನಾಟಕಕ್ಕೆ ಮಂಗಳ ಹಾಡುವಂತೆ ಅವರು ರಾಜ್ಯ ಸರ್ಕಾರ, SIT ತಂಡಕ್ಕೆ ಒತ್ತಾಯಿಸಿದ್ದಾರೆ.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ನೂರಾರು ಹೆಣಗಳನ್ನು ಹೂತಿದ್ದಾಗಿ ದೂರುದಾರನ ದೂರಿನನ್ವಯ, ಹಲವು ಕಡೆಗಳಲ್ಲಿ ಈಗಾಗಲೇ SIT ಅಧಿಕಾರಿಗಳು ಹಲವಾರು ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಯಾವುದೇ ಕುರುಹುಗಳು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
SIT ಆ ದೂರುದಾರನನ್ನು ಕರೆದುಕೊಂಡು ಎಷ್ಟು ದಿನ ನೆಲ ಅಗೆಯಲಿದೆ. ಆತನನ್ನು ತಕ್ಷಣ ಒದ್ದು ಒಳಗೆ ಹಾಕಿ. ಈ ನಾಟಕ ನಿಲ್ಲಿಸಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
























