ಬಾವಿಗೆ ಹಾರಿ ಪ್ರಸಿದ್ಧ ಹಾಸ್ಯ ಕಲಾವಿದ ಗೋಪಾಲಕೃಷ್ಣ ಜೋಶಿಯವರ ಪುತ್ರ ಆತ್ಮಹತ್ಯೆ

ವಿಟ್ಲ: ಯಕ್ಷಗಾನ ಲೋಕದಲ್ಲಿ ರಸಿಕ ‘ರತ್ನ ಬಿರುದು’ ಪಡೆದ ಹಾಸ್ಯ ಕಲಾವಿದ ಗೋಪಾಲಕೃಷ್ಣ ಜೋಶಿಯವರ ಪುತ್ರ ರವಿ ಜೋಶಿ (68) ಬುಧವಾರ ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಟ್ಲದ ಅಡ್ಡದ ಬೀದಿಯಲ್ಲಿ ನಡೆದಿದೆ.
ಇವರು ಕರ್ನಾಟಕ ಬ್ಯಾಂಕ್‌ ನ ನಿವೃತ್ತ ಉದ್ಯೋಗಿಯಾಗಿದ್ದರು. ಮನೆ ಮುಂದಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿದ ಜೋಶಿ ಆವರ ಶವವನ್ನು ಸ್ಥಳೀಯರು ಪತ್ತೆ ಹಚ್ಚಿದ್ದಾರೆ. ಸ್ಥಿಳಕ್ಕೆ ವಿಟ್ಲ ಪೋಲಿಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಕಳೆದ ಮೂರು ವರ್ಷಗಳ ಹಿಂದೆ ಹಿರಿಯ ಪುತ್ರಿಯ ಅಕಾಲಿಕ ಮರಣದಿಂದ ಮನೋವೈಕಲ್ಯಕ್ಕೊಳಗಾಗಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು,ಪತ್ನಿ ಹಾಗೂ ತಾಯಿ ಮನೆಯೊಳಗಿದ್ದ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೃತರು ತಾಯಿ,ಪತ್ನಿ, ಪುತ್ರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.





















































 
 
error: Content is protected !!
Scroll to Top