ಧರ್ಮಸ್ಥಳ: ನೂರಾರು ಶವಗಳನ್ನು ಹೂತಿಡಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ 13 ನೇ ಪಾಯಿಂಟ್ ನಲ್ಲಿ ಜಿಪಿಆರ್ ಬಳಸಿ ಶೋಧ ಮಾಡಲಾಗಿದ್ದು, ಸುತ್ತಮುತ್ತಲ 200 ಮೀ. ಸ್ಥಳದಲ್ಲಿ ಕಳೇಬರದ ಯಾವುದೇ ಕುರುಹುಗಳ ಸಿಗ್ನಲ್ ಸಿಕ್ಕಿಲ್ಲ ಎಂದು ಹೇಳಲಾಗಿದೆ.
ಸಿಗ್ನಲ್ ಸಿಕ್ಕಲ್ಲಿ ಆ ಪ್ರದೇಶವನ್ನು ಅಗೆಯಲು ಹಿಟಾಚಿಯ ವ್ಯವಸ್ಥೆ ಸಹ ಮಾಡಲಾಗಿತ್ತು. ಆದರೆ ಗುರುತಿಸಲಾದ ಪ್ರದೇಶದಲ್ಲಿ ಮತ್ತು ಅಜಿಕುರಿ ರಸ್ತೆಯಲ್ಲಿಯೂ ಜಿಪಿಆರ್ ಬಳಸಿ ಸಿಗ್ನಲ್ ಸಿಗುವುದೋ ಎಂದು ಪರಿಶೀಲನೆ ನಡೆಸಲಾಗಿದ್ದು, ಕಳೇಬರದ ಕುರುಹುಗಳಿರುವ ಯಾವುದೇ ಸಿಗ್ನಲ್ ದೊರೆತಿಲ್ಲ ಎಂದು ತಿಳಿದು ಬಂದಿದೆ.
ಸ್ಥಳದಲ್ಲಿ SIT ಮುಖ್ಯಸ್ಥ ಡಾ. ಪ್ರಣವ್ ಮೊಹಂತಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಜರಿದ್ದರು.
























