ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಪ್ರಸ್ತುತ SIT ಶೋಧಿಸಿದ ಸ್ಥಳಗಳಲ್ಲಿ ಅನಾಮಿಕ ದೂರುದಾರ ಹೇಳಿದ ಯಾವುದೇ ಕುರುಹುಗಳು ಸಿಗದೇ ಹೋದಲ್ಲಿ ಆತನನ್ನೇ ನೇಣಿಗೆ ಹಾಕಬೇಕು ಎಂದು ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ಈ ಸಂಬಂಧ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಧರ್ಮಸ್ಥಳ ದೇಗುಲ ಮತ್ತು ಅಲ್ಲಿನ ಧರ್ಮಾಧಿಕಾರಿಗಳಿಗೆ ಯಾವುದೇ ಕಳಂಕ ಬಾಧಿಸಲು ಬಿಡುವುದಿಲ್ಲ. ಸದ್ಯ ತನಿಖೆ ನಡೆಯುತ್ತಿದೆ. ಆದರೆ ಶವಗಳು ಸಿಗುತ್ತಿಲ್ಲ. ಒಂದು ವೇಳೆ ಈ ತನಿಖೆಯಲ್ಲಿ ದೂರುದಾರ ಹೇಳಿದಂತೆ ಶವಗಳು ದೊರೆಯದಲ್ಲಿ ಆತನನ್ನು ಸುಮ್ಮನೆ ಬಿಡಬಾರದು, ನೇಣು ಹಾಕಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಧರ್ಮಸ್ಥಳ ದೇಗುಲದ ಒಳಗೆ ಅಗೆಯಲು ಅವಕಾಶ ನೀಡುವುದಿಲ್ಲ. ಈ ಆರೋಪಗಳಿಂದ ಗೊಂದಲ ಉಂಟಾಗಬಾರದು ಎನ್ನುವ ಕಾರಣಕ್ಕೆ ಸರ್ಕಾರ SIT ತನಿಖೆಗೆ ಸೂಚಿಸಿದೆ. ಈ ಪ್ರಕರಣದಲ್ಲಿ ಬೇರೊಂದು ಸಮುದಾಯದ ಭಾಗವಹಿಸುವಿಕೆ ಇಲ್ಲ ಎಂದು ಅವರು ತಿಳಿಸಿದ್ದಾರೆ.
























