ಲಿಟ್ಲ್ ಫ್ಲವರ್ ಶಾಲೆಗೆ ಬೆಥನಿ ಸಂಸ್ಥೆಯ ಜನರಲ್ ಕೌನ್ಸಿಲರ್ ಡಾ. ಮಾರಿಯೆಟ್ ಬಿ‌. ಎಸ್. ಭೇಟಿ

ಪುತ್ತೂರು: ಶತಮಾನದ ಸನಿಹದಲ್ಲಿರುವ ಲಿಟ್ಲ್ ಫ್ಲವರ್ ಶಾಲೆಗೆ ಬೆಥನಿ ಸಂಸ್ಥೆಯ ಜನರಲ್ ಕೌನ್ಸಿಲರ್ ಡಾ. ಮಾರಿಯೆಟ್ ಬಿ. ಎಸ್. ಭೇಟಿ ಕಾರ್ಯಕ್ರಮ ನಡೆಯಿತು.

ಶಾಲಾ ನಾಯಕ ಆಕಾಶ್ ನೇತೃತ್ವದಲ್ಲಿ ಬ್ಯಾಂಡ್ ಮೂಲಕ ಸ್ವಾಗತಿಸಿ ವೇದಿಕೆಗೆ ಕರೆತರಲಾಯಿತು.

ವೇದಿಕೆಯಲ್ಲಿ ಬೆಥನಿ ಸಂಸ್ಥೆಯ ಜನರಲ್ ಪ್ರೊಕ್ಯುರೇಟರ್ ವೈಲೆಟ್ ಬಿ. ಎಸ್., ಶಾಲಾ ಸಂಚಾಲಕಿ ಪ್ರಶಾಂತಿ ಬಿ. ಎಸ್., ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ವಿನಯ ಸುವರ್ಣ, ಶಾಲಾ ಸುರಕ್ಷಾ ಸಮಿತಿ ಅಧ್ಯಕ್ಷ ಚೇತನ್ ಕುಮಾರ್ ಮೊಟ್ಟೆತಡ್ಕ ಉಪಸ್ಥಿತರಿದ್ದರು.





















































 
 

ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮುಖ್ಯ ಶಿಕ್ಷಕಿ ವೆನಿಶಾ ಬಿ. ಎಸ್. ಸ್ವಾಗತಿಸಿದರು. ಬಳಿಕ ಶಿಕ್ಷಕರ ಜೊತೆ ಸಂವಾದ ನಡೆಯಿತು. ಶಾಲಾ ನಿಯೋಜಿತ ಮುಖ್ಯ ಶಿಕ್ಷಕಿ ಐರಿನ್ ವೇಗಸ್ ವಂದಿಸಿದರು.

ಮಕ್ಕಳಿಂದ ಬೆಥನಿ ಸಂಸ್ಥೆಯ ಪ್ರಮುಖ ಆದ್ಯತೆಗಳ ಕಿರು ನಾಟಕ ಪ್ರದರ್ಶನ ನಡೆಯಿತು.

error: Content is protected !!
Scroll to Top