ಧರ್ಮಸ್ಥಳ ಪ್ರಕರಣ: 13 ನೇ ಪಾಯಿಂಟ್ ಶೋಧನೆಗೆ ಡ್ರೋಣ್ ಜಿಪಿಆರ್ ಬಲ

ಧರ್ಮಸ್ಥಳ: ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಈಗಾಗಲೇ ಮುಸುಕುಧಾರಿ ‌ದೂರುದಾರ ಗುರುತಿಸಿದ 13 ನೇ ಪಾಯಿಂಟ್ ಉತ್ಖನನಕ್ಕೆ ಡ್ರೋಣ್- ಮೌಂಟೆಡ್ GPR ತಂತ್ರಜ್ಞಾನ ಬಳಸಿ ಕಾರ್ಯಾಚರಣೆ ಆರಂಭ ಮಾಡಲಾಗಿದೆ.

ಸಾಮಾನ್ಯ GPR ಆ್ಯಂಟೆನಾ‌ವನ್ನು ಡ್ರೋಣ್ ಕೆಳಭಾಗದಲ್ಲಿ ಅಳವಡಿಕೆ ಮಾಡುವ ಮೂಲಕ ಭೂಮಿಯೊಳಗೆ ಸಿಗ್ನಲ್ ರವಾನೆ ಮಾಡುತ್ತದೆ. ಈ ಸಿಗ್ನಲ್‌ಗೆ ಭೂಮಿಯೊಳಗಿಂದ ಮರು‌‌ ಸಿಗ್ನಲ್ ಬರುತ್ತದೆ. ಈ ಸಿಗ್ನಲ್‌ಗಳನ್ನು ಸೆನ್ಸಾರ್‌ಗಳು ದಾಖಲಿಸಿಕೊಂಡು 2D ಅಥವಾ 3 D ಚಿತ್ರವಾಗಿ ಪರಿವರ್ತಿಸಿ ಫಲಿತಾಂಶ ನೀಡುತ್ತದೆ. ಈ ತಂತ್ರಜ್ಞಾನ ದೊಡ್ಡ ಪ್ರದೇಶಗಳ ಕಾರ್ಯಾಚರಣೆಗೆ ಹೆಚ್ಚು ಉಪಕಾರಿಯಾಗಿದೆ‌.





















































error: Content is protected !!
Scroll to Top