ಭಾರತ ವಿಶ್ವಗುರವಾಗಲು ಸಂಸ್ಕೃತಿಯನ್ನು ಕಾಪಾಡಬೇಕಿದೆ – ಭವ್ಯಾ ನಿಡ್ಪಳ್ಳಿ

ಪುತ್ತೂರು: ಬನ್ನೂರಿನ ಅಲುಂಬುಡದಲ್ಲಿರುವ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನಲ್ಲಿ ನಡೆದ ಆಟಿ ಆಚರಣೆ ಕೂಟ ಮತ್ತು ಬನ್ನೂರು ಒಕ್ಕಲಿಗ ಗ್ರಾಮ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಿವೇಕಾನಂದ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕಿ ಭವ್ಯಾ ಪಿ.ಆರ್. ನಿಡ್ಪಳ್ಳಿ ಅವರು ಶಿಖರೋಪನ್ಯಾಸ ನೀಡಿದರು.  ಇಂದಿನ ಕಾರ್ಯಕ್ರಮವು ಭಾರತ ವಿಶ್ವಗುರುವಾಗಲು ನೆರವಾಗುವ ಕಾರ್ಯಕ್ರಮವಾಗಿದೆ ಏಕೆಂದರೆ ಭಾರತ ಗಟ್ಟಿಯಾಗಬೇಕಾದರೆ ಪ್ರತಿಯೊಂದು ಸಮುದಾಯವೂ ತಳಮಟ್ಟದಲ್ಲಿ ಗಟ್ಟಿಯಾಗಬೇಕು. ಆ ಕೆಲಸ ಇಂದು ಇಲ್ಲಿ ಆಗಿದೆ ಎಂದರು. ಆಟಿ ಆಚರಣೆಯ ನೆಪದಲ್ಲಿ ನಾವು ನಮ್ಮ ಐತಿಹಾಸಿಕವಾದ ಸಂಸ್ಕೃತಿ, ಆಹಾರ, ಆರಾಧನೆಗಳನ್ನು ಅಳವಡಿಸಿಕೊಂಡು, ಆಚರಿಸಿ ಉಳಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ತಾಲೂಕು ಒಕ್ಕಲಿಗ ಗೌಡ ಮಹಿಳಾ ಸೇವಾ ಸಂಘದ ಅಧ್ಯಕ್ಷೆ ವಾರಿಜಾ ಬೆಳ್ಯಪ್ಪ ಗೌಡ ಮಾತನಾಡಿ ಯಾವುದೇ ಆಚರಣೆ ನಮ್ಮ ಸಂಘದ ಒಗ್ಗಟ್ಟಿಗೆ ಕಾರಣವಾಗಬೇಕು ಎಂದರು. ಯುವ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷರಾದ ಅಮರನಾಥ್ ಬಪ್ಪಳಿಗೆ ಶುಭ ಹಾರೈಸಿದರು.  ಸಭಾಧ್ಯಕ್ಷ ಸೂರಜ್ ಗೌಡ ಗೋಳ್ತಿಲ ಅಧ್ಯಕ್ಷ ಸ್ಥಾನದಿಂದ ಮಾತನಾಡಿದರು.

ಬನ್ನೂರು ಒಕ್ಕಲಿಗ ಗ್ರಾಮ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ





















































 
 

ನೂತನ ಸಮಿತಿಯ ಅಧ್ಯಕ್ಷರಾಗಿ ರಮೇಶ್ ಗೌಡ ನೀರ್ಪಾಜೆ, ಪ್ರಧಾನ ಕಾರ್ಯದರ್ಶಿಯಾಗಿ ಸರಿತಾ ವಿಶ್ವನಾಥ ಗೌಡ ಗುಂಡಿಜಾಲು ಕೆಮ್ಮಾಯಿ, ಉಪಾಧ್ಯಕ್ಷರಾಗಿ ತಿಮ್ಮಯ್ಯ ಗೌಡ ಬನ್ನೂರು, ಜತೆ ಕಾರ್ಯದರ್ಶಿಯಾಗಿ ಸೌಮ್ಯಾ ಕೃಷ್ಣಕುಮಾರ್ ಜೈನರಗುರಿ ಕೋಶಾಧಿಕಾರಿಯಾಗಿ ರಾಧಾ ಚಂದ್ರ ಗೌಡ ನೆಕ್ಕಿಲ ಪದ ಸ್ವೀಕಾರ ಮಾಡಿದರು. 

ಮಾನ್ಯತೆ ಪಡೆದ ಮಾನ್ಯಾ

2025ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625ರಲ್ಲಿ 623 ಅಂಕಗಳನ್ನು (99.52%) ಪಡೆದು ರಾಜ್ಯಕ್ಕೆ ತೃತೀಯ ಸ್ಥಾನ ಪಡೆದ ಗೌಡ ಸಮುದಾಯದ ಹುಡುಗಿಯಾದ ಮೂವಪ್ಪು ಮನೆತನದ ಉಮೇಶ-ವಾರಿಜಾ ದಂಪತಿಯ ಪುತ್ರಿ ಮಾನ್ಯಾ ಎಂ. ಇವಳನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ 85%ಕ್ಕಿಂತ ಹೆಚ್ಚು ಅಂಕ ಗಳಿಸಿದ ಕಳೆದ ಬಾರಿಯ ಅಂತಿಮ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಎಸ್.ಎಸ್.ಎಲ್.ಸಿ. ವಿಭಾಗದ ಅಮೃತಾ ಬಿ.ಎ. – 96.32% (ಲತಾ ಅಮರನಾಥ ಪಟ್ಟೆ), ಎ.ಎನ್. ಜಿತಿನ್ – 94% (ಪ್ರತಿಭಾ ಎ.ವಿ. ನಾರಾಯಣ), ಆಶಿತಾ – 94% (ಹೇಮಲತಾ ನಾರಾಯಣ ಗೌಡ ಹಲಂಗ), ಕಾವ್ಯಾ ಎಚ್. – 95%  (ಮಮತಾ ಮೋಹನ್ದಾಸ್ ಹಲಂಗ), ಕೃತಿ – 93% (ವನಿತಾ ಕೊರಗಪ್ಪ ಗೌಡ), ಜೀವಿತಾ – 93% (ಯಶೋದಾ ವಿಶ್ವನಾಥ ಗೌಡ ಹಲಂಗ), ಯಶಸ್ವಿ – 92% (ಮಮತಾ ಹರೀಶ್ ಗೌಡ) ಮತ್ತು ಪಿಯುಸಿ ವಿಭಾಗದ ಧನ್ರಾಜ್ (ಯಶೋದಾ ವಿಶ್ವನಾಥ ಗೌಡ ಹಲಂಗ) ಇವರನ್ನು ಗೌರವಿಸಲಾಯಿತು.

ಮಾಜಿ ಶಾಸಕ ಸಂಜೀವ ಮಠಂದೂರು ಆಗಮಿಸಿ ಶುಭ ಹಾರೈಸಿದರು.

ಕಾರ್ಯಕ್ರಮಕ್ಕೆ ದೇಣಿಗೆ ನೀಡಿದ ಪ್ರಮುಖರು ಮತ್ತು ಆಹಾರ ವಸ್ತುಗಳನ್ನು ತಯಾರಿಸಿ ತಂದವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನ ಸಂಚಾಲಕ ಎ.ವಿ. ನಾರಾಯಣ ಮತ್ತು ಬನ್ನೂರು ಗ್ರಾಮ ಸಮಿತಿಯ ನಿರ್ಗಮನಾಧ್ಯಕ್ಷ ಸೋಮಪ್ಪ ಗೌಡ ಸಪ್ತಗಿರಿ ಉಪಸ್ಥಿತರಿದ್ದರು. ಉಷಾಕಿರಣ ಯಶವಂತ ವರದಿ ವಾಚಿಸಿದರು. ಶ್ರೀಮತಿ ಸುಮಲತಾ ಹಲಂಗ ನಿರೂಪಿಸಿದ ಕಾರ್ಯಕ್ರಮದಲ್ಲಿ ರಾಧಾಕೃಷ್ಣ ಗೌಡ ಬನ್ನೂರು ಅವರು ಒಕ್ಕಲಿಗ ಹಾಡಿನ ಮೂಲಕ  ಪ್ರಾರ್ಥನೆ, ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್’ನ ಪ್ರಾಂಶುಪಾಲ ಅಮರನಾಥ್ ಪಟ್ಟೆ ಸ್ವಾಗತ ಮತ್ತು ರಮೇಶ್ ಗೌಡ ನೀರ್ಪಾಜೆ ವಂದನಾರ್ಪಣೆಗಳನ್ನು ನೆರವೇರಿಸಿದರು.  ಪ್ರತಿಭಾ ದೇವಿ, ಆಶಾಕಿರಣ, ವಸಂತ ಗೌಡ ದೇವಶ್ಯ, ಈಶ್ವರ ಗೌಡ ಗೋಳ್ತಿಲ, ರಾಮಣ್ಣ ಗೌಡ ಹಲಂಗ, ವನಿತಾ, ಯಶೋದಾ ಮತ್ತು ಪದ್ಮಯ್ಯ ಗೌಡ ದೇವಶ್ಯ  ಅತಿಥಿಗಳನ್ನು ಗೌರವಿಸಿದರು. ಕೊನೆಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆಯ ಬಳಿಕ ಎಲ್ಲರಿಗೂ ಆಟಿಯ ವಿಶೇಷ ಖಾದ್ಯಗಳ ಸಹಿತವಾದ ಸುಗ್ರಾಸ ಭೋಜನದ ವ್ಯವಸ್ಥೆಯಿತ್ತು.

error: Content is protected !!
Scroll to Top