ವಿಶ್ವ ಹಿಂದೂ ಪರಿಷದ್ ಸಂಸ್ಥಾಪನಾ ದಿನಾಚರಣೆ | 15ನೇ ವರ್ಷದ ಮೊಸರು ಕುಡಿಕೆ ಉತ್ಸವದ ಅಂಗವಾಗಿ ವಿವಿಧ ಸ್ಪರ್ಧೆಗಳು

ಪುತ್ತೂರು: ವಿಶ್ವ ಹಿಂದೂ ಪರಿಷದ್‍ ಸ್ಥಾಪನಾ ದಿನಾಚರಣೆ ಅಂಗವಾಗಿ ಪುತ್ತೂರು ಜಿಲ್ಲಾ ವಿಶ್ವ ಹಿಂದೂ ಪರಿಷತ್‍, ಬಜರಂಗದಳ ಹಾಗೂ ಮೊಸರುಕುಡಿಕೆ ಆಚರಣಾ ಸಮಿತಿ ವತಿಯಿಂದ 15ನೇ ವರ್ಷದ ಮೊಸರುಕುಡಿಕೆ ಉತ್ಸವದ ಪ್ರಯಕ್ತ ವಿವಿಧ ಸ್ಪರ್ಧೆಗಳು ಭಾನುವಾರ ಜರಗಿತು.

ಶ್ರೀಕೃಷ್ಣನ ವೇಷ, ಭಗವದ್ಗೀತಾ ಪಠಣ, ದೇಶಭಕ್ತಿ ಗೀತೆ, ಭಾರತಮಾತೆ ಚಿತ್ರ ಬಿಡಿಸುವುದು, ರಂಗವಲ್ಲಿ ಹಾಗೂ ಸ್ಮರಣ ಶಕ್ತಿ ಸ್ಪರ್ಧೆಗಳು ಭಾನುವಾರ ಶ್ರೀ ಮಹಾಲಿಂಗೇಶ್ವರ ವಠಾರದಲ್ಲಿರುವ ಮೂರು ವೇದಿಕೆಗಳಲ್ಲಿ ಏಕಕಾಲದಲ್ಲಿ ನಡೆಯಿತು.

ಮುದ್ದು, ಕಂದ, ಕಿಶೋರ, ರಾಧಾಕೃಷ್ಣ ಹಾಗೂ ಬಾಲಕೃಷ್ಣ ಹಿರಿಯ ಹೀಗೆ ಐದು ವಿಭಾಗಗಳಲ್ಲಿ ಶ್ರೀಕೃಷ್ಣನ ವೇಷ ಸ್ಪರ್ಧೆ ಜರಗಿತು. ಸ್ಪರ್ಧೆಗಾಗಿ ಮಕ್ಕಳ ಹೆತ್ತವರು ತಮ್ಮ ಶ್ರೀಕೃಷ್ಣ ವೇಷಧಾರಿ ಮಕ್ಕಳೊಂದಿಗೆ ಬೆಳೆಗ್ಗೆಯಿಂದಲೇ ಆಗಮಿಸಿದ್ದರು.





















































 
 

ವಿವಿಧ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಸುಲೋಚನಾ, ಮನೋರಮಾ ಕಲ್ಲೂರಾಯ, ವೀಣಾ ನಿಡ್ವಣ್ಣಾಯ, ಸುಧಾ, ಅನುರಾಧಾ, ಪ್ರೇಮಲತಾ ರಾವ್‍, ವತ್ಸಲಾರಾಜ್ಞಿ, ಚಂದ್ರಪ್ರಭಾ, ಸುಧಾ ಹೆಬ್ಬಾರ್‍, ಶಾಂತಿ, ಸತೀಶ್‍ ಇರ್ದೆ, ಪದ್ಮನಾಭ, ಮೋಹಿನಿ ದಿವಾಕರ್‍ ಹಾಗೂ ಸುಚೇತ ಸಹಕರಿಸಿದರು.

ಯೆಲ್ತಿಮಾ‌ರ್ ವಿಜಯಲಕ್ಷ್ಮೀ ಶೆಣೈ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿದರು. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಂದನಾ ಶಂಕರ್, ಕೆನರಾ ಬ್ಯಾಂಕ್ ಕೆದಿಲ ಶಾಖೆಯ ಗುಮಾಸ್ತೆ ಜಯಲಕ್ಷ್ಮೀ ಡಿ ಎಸ್, ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಸದಸ್ಯ ಭಾಸ್ಕರ ಬಲ್ಯಾಯ ಅಭಿಜ್ಞಾನ, ಬಜರಂಗದಳ ಮಾಜಿ ಸಂಚಾಲಕ ಲಕ್ಷ್ಮಣ ಬೆಳ್ಳಿಪ್ಪಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

error: Content is protected !!
Scroll to Top